×
Ad

ಹೆಲ್ಪ್ ಲೈನ್ ಕರ್ನಾಟಕ: ರಕ್ತದಾನದ ಮೂಲಕ ಮಹೇಂದ್ರ ಕುಮಾರ್‌ಗೆ ಶ್ರದ್ಧಾಂಜಲಿ

Update: 2020-04-26 20:44 IST

ಮಂಗಳೂರು, ಎ.26: ‘ನಮ್ಮ ಧ್ವನಿ’ ಸಂಸ್ಥಾಪಕ, ಪ್ರಗತಿಪರ ಚಿಂತಕ ದಿ. ಮಹೇಂದ್ರ ಕುಮಾರ್‌ಗೆ ಪವಿತ್ರ ರಮಝಾನ್‌ನ ವೃತ ಹಿಡಿದು ಉಪವಾಸ ತೊರೆದ ಬಳಿಕ ಎ1 ಕ್ಯಾಬ್ಸ್ ತಂಡದ ರಿಯಾಝ್ ನೇತೃತ್ವದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಸಹಯೋಗದೊಂದಿಗೆ ರಕ್ತದಾನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ರಕ್ತ ನಿಧಿಯಲ್ಲಿ ಸದಸ್ಯರಾದ ಮುನೀರ್ ಕಣ್ಣೂರು, ಸಿನಾನ್ ಕಣ್ಣೂರು, ನಿಝಾರ್ ಕಣ್ಣೂರು, ಮುಸ್ತಫಾ ಕಣ್ಣೂರು, ಶಾಫಿ ಕಣ್ಣೂರು,ಮಲ್ಲಯ್ಯ ಗದಗ,ಸಫ್ವಾನ್ ಕಣ್ಣೂರು,ರಿಝ್ವಾನ್ ಕಣ್ಣೂರು, ಝಿಯಾದ್ ಕಣ್ಣೂರು,ಚಂದು ಬೆಳ್ತಂಗಡಿ,ಅಪ್ಪುಕಣ್ಣೂರು ಮತ್ತು ಮುಹಮ್ಮದ್ ಕಣ್ಣೂರು ಸಹಿತ 12 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕ ನಿಸಾರ್ ಉಳ್ಳಾಲ ಹಾಗೂ ಶಕೀಲ್ ಉಳ್ಳಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News