ದ.ಕ.ಜಿಲ್ಲಾದ್ಯಂತ ಗಾಳಿ, ಮಳೆ
Update: 2020-04-26 21:18 IST
ಮಂಗಳೂರು, ಎ. 26 : ದ.ಕ. ಜಿಲ್ಲಾದ್ಯಂತ ರವಿವಾರ ಸಂಜೆ ಭಾರೀ ಗಾಳಿ ಮಳೆ ಸುರಿದಿದೆ.
ಮಂಗಳೂರು ನಗರದಲ್ಲಿ ಸಾಧಾರಣ ಮಳೆ ಸುರಿದರೆ ಗ್ರಾಮಾಂತರ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ. ಉಳ್ಳಾಲ, ದೇರಳಕಟ್ಟೆ, ಕೊಣಾಜೆ ಮತ್ತಿತರ ಕಡೆ ಸುರಿದ ಗಾಳಿ ಮಳೆಗೆ ಮರಗಳು ಉರುಳಿವೆ. ಕೆಲವು ಕಡೆ ಮನೆಯ ಹೆಂಚು ಹಾರಿದ ಬಗ್ಗೆ ವರದಿಯಾಗಿವೆ.
ಪುತ್ತೂರು: ಪುತ್ತೂರಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆಗೆ ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಸಂಜೆ 4 ಗಂಟೆಯ ಬಳಿಕ ಮೋಡ ಕವಿದ ವಾತಾವರಣವಿತ್ತು.
ಆತೂರು ಮಸೀದಿ ಸಮೀಪವೂ ಸಿಡಿಲು, ಮಿಂಚು ಸಹಿತ ಗಾಳಿ ಮಳೆಯಾಗಿದೆ.