ಕೃಷಿ ಚಟುವಟಿಕೆ, ಹೈನುಗಾರಿಕೆ, ತೋಟಗಾರಿಕೆ ಚಟುವಟಿಕೆ ನಡೆಸಲು ಯಾವೂದೇ ಅಡ್ಡಿ ಇಲ್ಲ : ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಎ. 26:ಕೃಷಿ ಚಟುವಟಿಕೆ , ಹೈನುಗಾರಿಕೆ ,ತೋಟಗಾರಿಕೆ ಚಟುವಟಿಕೆ ನಡೆಸಲು ಲಾಕ್ ಡೌನ್ ಸಂದರ್ಭದಲ್ಲಿ ಯಾವೂದೇ ಅಡ್ಡಿ ಪಡಿಸಲಾಗುವುದಿಲ್ಲ .ಸರಕಾರದ ನಿರ್ದೇಶನ ದೊರೆತ ಬಳಿಕ ಮೇ 3ರ ಬಳಿಕ ಜಿಲ್ಲೆಯ ಕಂಟೈನ್ ಮೆಂಟ್ ರೆನ್ ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್‌ಡೌನ್ ಸಡಿಲಿಕೆಯ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಲಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ರವಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ಹಮ್ಮಿಕೊಂಡ ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲೆಯ ಜನತೆ ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕೊರೋನ ಸೋಂಕು ಪೀಡಿತರ ಚೇತರಿಕೆ ಪ್ರಮಾಣ ಉತ್ತಮವಾಗಿದೆ. ಈ ನಡುವೆ ಬಂಟ್ವಾಳದಲ್ಲಿ ಎರಡು ಪ್ರಕರಣಗಳಲ್ಲಿ ಸಾವು ಸಂಭವಿಸಿದೆ. ಕೊರೋನ ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದಾಗ ಜಿಲ್ಲೆಯ ಜನರಿಗೆ ಹಲವು ಸಮಸ್ಯೆಗಳಾಗಿರಬಹುದು. ಆದರೂ ಜಿಲ್ಲೆಯ ಜನತೆ ಜಿಲ್ಲಾಡಳಿತದ ಜೊತೆ ಸಹಕಾರ ನೀಡಿದ್ದಾರೆ ಅದಕ್ಕಾಗಿ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದೇ ಸಹಕಾರವನ್ನು ಇನ್ನೂ ಕೆಲಕಾಲ ಮುಂದುವರಿಸಬೇಕಾಗಿದೆ.ಜಿಲ್ಲೆಯ ಜನತೆ ಸ್ವಯಂ ಸೇವೆಯೊಂದಿಗೆ ನಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದೆಯೂ ಜನ ಗುಂಪಾಗಿ ಸೇರುವುದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಮುಂದೆಯೂ ವೈಯಕ್ತಿಕ ಸ್ವಚ್ಛತೆ, ಸುರಕ್ಷತಾ ಅಂತರ ವನ್ನು ಕಾಪಾಡುವುದು ದೀರ್ಘಕಾಲ ಮುಂದುವರಿ ಸಬೇಕಾಗಿದೆ. ಈ ಚಟುವಟಿಕೆ ನಮ್ಮ ದಿನಚರಿಯಾಗಬೇಕಾಗಿದೆ.
ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮೇ 3ರ ಬಳಿಕ ತೀರ್ಮಾನ:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕು ಹರಡುವಿಕೆಯ ಪ್ರಮಾಣ ನಿಯಂತ್ರಣದಲ್ಲಿದೆ.ಜಿಲ್ಲೆಯ ಜನರ ಸಹಕಾರದಿಂದ ನಡೆದಿರುವ ಲಾಕ್ ಡೌನ್ ಕೊರೋನ ಸೋಂಕು ತಡೆಗೆ ಸಹಕಾರಿಯಾಗಿದೆ. ಹೆಚ್ಚಿನ ಅನಾರೋಗ್ಯದಿಂದ ಬಳಲುತ್ತಿರುವ ವರು,ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ಗಮನಹರಿ ಸಬೇಕಾಗಿದೆ. ಕಳೆದ ಕೆಲವು ದಿನಗಳಲ್ಲಿ ಬಂಟ್ವಾಳದಲ್ಲಿ ಒಂದು ಪ್ರದೇಶವನ್ನು ಗುರುತಿಸಿ ಹೆಚ್ಚಿನ ನಿಗಾವಹಿಸಲಾಗುತ್ತಿದೆ.ಕಂಟೈನ್‌ಮೆಂಟ್ ರೆನ್ ಹೊರತು ಉಳಿದ ಪ್ರದೇಶದಲ್ಲಿ ನಿಧಾನವಾಗಿ ಮೇ 3ರ ನಂತರ ಸರಕಾರದ ಸೂಚನೆಯ ಪ್ರಕಾರ ಹಲವು ವಿನಾಯಿತಿಗಳನ್ನು ಸಾರ್ವಜನಿಕರಿಗೆ ದೊರೆಯಬಹುದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೂರು ರೀತಿಯಲ್ಲಿ ಪಾಸ್ ವಿತರಿಸಲಾಗುತ್ತಿದೆ.ಒಂದು ಜಿಲ್ಲೆಯ ಒಳಗೆ ವೈದ್ಯಕೀಯ ಕಾರಣಗಳಿಗಾಗಿ ಒಂದು ದಿನದ ಪಾಸ್ ಸಹಾಯವಾಣಿ 1077 ಪೋನ್ ಮೂಲಕ ಸಂಪರ್ಕಿದವರಿಗೆ ಸಂಪರ್ಕಿಸಿದವರ ಮೊಬೈಲ್ ದೂರವಾಣಿಗೆ ನೀಡಲಾಗುತ್ತಿದೆ.ಅಗತ್ಯದ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಮಂಗಳೂರು ಎ.ಸಿ (ಸಹಾಯಕ ಕಮೀಷನರ್ )ಹಾಗೂ ಪುತ್ತೂರು ಎ.ಸಿ ಯವರ ಮೂಲಕ ಆಲ್‌ಲೈನ್ ಅರ್ಜಿ ಸ್ವೀಕರಿಸಿ ಇ- ಪಾಸ್ ನೀಡಲಾಗುತ್ತಿದೆ.ಇನ್ನೊಂದು ಗಂಭೀರ ತುರ್ತು ವೈದ್ಯಕೀಯ ಅಥವಾ ಹತ್ತಿರದವರ ಮರಣ ಸಂಭವಿಸಿದ ಸಂದರ್ಭದಲ್ಲಿ ಡಿ.ಸಿ ಕಚೇರಿ ಮತ್ತು ಎಸ್.ಪಿ ಕಚೇರಿಯ ಮೂಲಕ ಪಾಸ್ ವಿತರಿಸಲಾಗುತ್ತಿದೆ. ನಿರ್ಮಾಣ ಕಾಮಗಾರಿಗಳಿಗೆ ಗ್ರಾಮೀಣ ಮತ್ತು ನಗರದಲ್ಲಿ ಅವಕಾಸ ನೀಡಲಾಗಿದೆ. ಆದರೆ ನಿರ್ಮಾಣ ಕಾಮಗಾರಿ ನಡೆಸುವ ಪ್ರದೇಶದಲ್ಲಿ ಹಲವು ನಿಯಮಗಳನ್ನು ಪಾಲಿಸುವವರಿಗೆ ಎ.ಸಿ.ಯವ ರ ಮೂಲಕ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಪಾಸ್ ನೀಡಲಾಗುತ್ತಿದೆ.ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ವಿದ್ಯುತ್ ಚಿತಾಗಾರ ಬಳಕೆಗೆ ಅವಕಾಶವಿದೆ:- ಜಿಲ್ಲೆಯಲ್ಲಿ ಕೊರೋನ ಬಗ್ಗೆ ಸಾಕಷ್ಟು ಭಯವಿದೆ ಮತ್ತು ಕೊವಿಡ್ ಬಗ್ಗೆ ಅರಿವಿನ ಕೊರತೆ ಇದೆ. ಕೊರೋನ ಕಾರಣದಿಂದ ಮೃತ ಪಟ್ಟವರ ಮೃತ ದೇಹವನ್ನು ಸರಕಾರದ ನಿರ್ದೇಶನದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಕೊವಿಡ್ ಶವವನ್ನು ಆ ಕಾರಣದಿಂದ ಘಟನೆಯನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಒಂದು ವಿದ್ಯುತ್ ಚಿತಾಗಾರ ಒಂದು ಇದೆ. ವಿದ್ಯುತ್ ಚಿತಾಗಾರದ ಮೂಲಕ ಶವ ದಹಿಸುವುದು ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯವಿದೆ. ಆದುದರಿಂದ ಜಿಲ್ಲೆಯಲ್ಲಿ ಇಂತಹ ಸಂದರ್ಭದಲ್ಲಿ ಯಾವೂದೆ ಶವವನ್ನು ದಹಿಸಲು ಜಿಲ್ಲೆಯ ವಿದ್ಯುತ್ ಚಿತಾಗಾರವನ್ನು ಬಳಸುವುದಕ್ಕೆ ಯಾವೂದೆ ಸಮಸ್ಯೆ ಇಲ್ಲ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.