ವುಹಾನ್ ಆಸ್ಪತ್ರೆಯಿಂದ ಎಲ್ಲಾ ಕೊರೋನ ರೋಗಿಗಳ ಬಿಡುಗಡೆ: ಚೀನಾ

Update: 2020-04-26 18:01 GMT

ಶಾಂಘೈ,ಎ.26: ಕೊರೋನಾ ವೈರಸ್ ಸೋಂಕಿನ ಉಗಮಸ್ಥಾನವಾದ ಚೀನಾದ ವುಹಾನ್ ನಗರದಲ್ಲಿನ ಆಸ್ಪತ್ರೆಯಲ್ಲಿ ಈಗ ಒಂದೇ ಒಂದು ಸೋಂಕಿನ ಪ್ರಕರಣಗಳಿಲ್ಲ ಹಾಗೂ ಎಲ್ಲಾ ರೋಗಿಗಳು ಗುಣುಖರಾಗಿ, ಬಿಡುಗಡೆಗೊಂಡಿದ್ದಾರೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

‘‘ಎಪ್ರಿಲ್ 26ರ ತಾಜಾ ಸುದ್ದಿಯೇನೆಂದರೆ, ವುಹಾನ್‌ನಲ್ಲಿ ಕೊರೋನ ವೈರಸ್ ಸೋಂಕಿನ ಹೊಸ ರೋಗಿಗಳ ಸಂಖ್ಯೆ ಶೂನ್ಯವಾಗಿದೆೆ. ವುಹಾನ್ ನಗರ ಹಾಗೂ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯ ಜಂಟಿ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ’’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಅವರು ಶನಿವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ವುಹಾನ್ ನಗರದಲ್ಲಿ ಈತನಕ 46,452 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ಚೀನಾದ್ಯಂತ ವರದಿಯಾದ ಒಟ್ಟು ಪ್ರಕರಣಗಳ ಶೇ.56ರಷ್ಟಾಗಿದೆ. ಕೊರೋನಾದಿಂದಾಗಿ ಒಟ್ಟು 3869 ಮಂದಿ ವುಹಾನ್‌ನಲ್ಲಿ ಸಾವನ್ನಪ್ಪಿದ್ದು, ಇದು ಚೀನಾದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆಯ ಶೇ.84 ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News