ಪಾಣೆಮಂಗಳೂರು: ಎಸ್ಸೆಸ್ಸೆಫ್, ಎಸ್.ವೈ.ಎಸ್ ವತಿಯಿಂದ ಎರಡನೇ ಹಂತದ ರಿಲೀಫ್ ಕಿಟ್ ವಿತರಣೆ

Update: 2020-04-26 18:22 GMT

ಬಂಟ್ವಾಳ, ಎ.26: ಲಾಕ್'ಡೌನ್ ಆರಂಭದಿಂದಲೇ ತುರ್ತು ಸೇವೆ ನಡೆಸುತ್ತಾ ಅರ್ಹ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ತಲುಪಿಸಿ ಮಾನವೀಯ ಸೇವೆ ನಡೆಸುತ್ತಿದ್ದ ಪಾಣೆಮಂಗಳೂರು ಎಸ್ಸೆಸ್ಸೆಫ್, ಎಸ್.ವೈ.ಎಸ್ ಇದೀಗ ಎರಡನೇ ಹಂತದಲ್ಲಿ 150 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಿದೆ. ಈ ಮೊದಲು 200 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ನೀಡಲಾಗಿತ್ತು. 

ಇದಲ್ಲದೆ ಆಹಾರ ಸಾಮಾಗ್ರಿಗಳಿಲ್ಲದೆ ಸಂಕಷ್ಟ ಅನುಭವಿಸುವ ಹಲವು ಕುಟುಂಬಗಳ ಕರೆಗೆ ಸ್ಪಂದಿಸುತ್ತಾ ತಕ್ಷಣ ಆಹಾರ ಸಾಮಾಗ್ರಿಗಳನ್ನು ಪೊರೈಸಲಾಗಿದೆ. ಮೂರನೇ ಹಂತದಲ್ಲಿ ಸಕ್ರಿಯ ಕಾರ್ಯಕರ್ತರ ಮನೆಗಳಿಗೆ ರಮಝಾನ್ ಕಿಟ್ ನೀಡುವ ಯೋಜನೆ ಹಾಕಲಾಗಿದೆ. ಈ ಎಲ್ಲಾ ಯೋಜನೆಗಳಿಗೆ ತುರ್ತು ಸೇವೆಕರು ವಾಟ್ಸಾಪ್ ಗ್ರೂಪ್'ನ ಸದಸ್ಯರು ಸಂಪೂರ್ಣವಾಗಿ ಸಹಕರಿಸಿದ್ದಾರೆ. ಮುಂದೆಯೂ ತಮ್ಮ ಕಾರ್ಯಯೋಜನೆಗಳನ್ನು ವಿಸ್ತರಿಸುವ ಹುಮ್ಮಸ್ಸಿನಲ್ಲಿರುವ ಸಂಘಟನೆಯ ಸದಸ್ಯರು ಮತ್ತಷ್ಟು ದಾನಿಗಳ ಸಹಾಯ ಸಹಕಾರ ಮತ್ತು ಎಲ್ಲರ ಪ್ರಾರ್ಥನೆಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News