ದ.ಕ. ಜಿಲ್ಲೆ : ಮತ್ತೆ ಇಬ್ಬರಲ್ಲಿ ಕೊರೋನ ಸೋಂಕು ದೃಢ
Update: 2020-04-27 12:32 IST
ಬಂಟ್ವಾಳ, ಎ. 27: ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್ - 19 (ಕೊರೋನ) ಸೋಂಕು ಸೋಮವಾರ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರದ ನಿವಾಸಿ 80 ವರ್ಷದ ಮಹಿಳೆ ಮತ್ತು ಅವರ ಪುತ್ರ 45 ವರ್ಷದ ಇಬ್ಬರು ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಯ ವರದಿಗಳು ಇಂದು ಸ್ವೀಕೃತವಾಗಿದ್ದು, ವರದಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಮವಾರ ರಾಜ್ಯದಲ್ಲಿ ಒಟ್ಟು 8 ಕೊರೋನ ಸೋಂಕು ಪಾಸಿಟಿವ್ ದೃಢವಾಗಿದೆ ಎಂದು ಪ್ರಕಟನೆ ತಿಳಿಸಿದೆ.