×
Ad

ಉಡುಪಿಯಲ್ಲಿ ಕೋವಿಡ್ ಜಾಗೃತಿಗಾಗಿ ಭಯಾನಕ ಕೊರೋನ ವೈರಸ್ ವೇಷ!

Update: 2020-04-27 14:23 IST

ಉಡುಪಿ, ಎ.27: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ‘ಕೊರೊನಾಸುರ ಅಟ್ಟಹಾಸ’ ಎಂಬ ಅಣುಕು ಪ್ರದರ್ಶನವನ್ನು ಸೋಮವಾರ ನಗರದ ಮಾರುಥಿ ವಿಥೀಕಾ ರಸ್ತೆಯಲ್ಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲಾಯಿತು.

ಭಯಾನಕ ಕೊರೊನಾಸುರ ವೇಷವನ್ನು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಧರಿಸಿದ್ದರು. ಮುಖಕ್ಕೆ ಮಾಸ್ಕ್ ಧರಿಸು ವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯು ಹೊರಡಿಸಿರುವ ಆರೋಗ್ಯ ಸುರಕ್ಷಾ ವಿಧಾನಗಳನ್ನು ಪಾಲಿಸುವಂತೆ ಈ ಪ್ರದರ್ಶನದ ಮೂಲಕ ಅರಿವು ಮೂಡಿಸಲಾಯಿತು.

ಈ ಜಾಗೃತಿ ಅಭಿಯಾನಕ್ಕೆ ರಂಗಭೂಮಿ ಕಲಾವಿದರಾದ ಅಶ್ವಿನಿ ದೇವಾ ಡಿಗ, ಶ್ರೀಪಾದ್ ಭಟ್, ಕೆ. ಬಾಲಗಂಗಾಧರ ರಾವ್, ಲೊಕೇಶ್, ಶಿವಣ್ಣ, ರಾಘವೇಂದ್ರ ಪ್ರಭು ಮೊದಲಾದವರು ಸಹಕರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News