ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾರೆ, ಆರೋಗ್ಯದಿಂದಿದ್ದಾರೆ: ದಕ್ಷಿಣ ಕೊರಿಯ

Update: 2020-04-27 12:48 GMT

ಸಿಯೋಲ್: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿಗಳನ್ನು ತಳ್ಳಿ ಹಾಕಿರುವ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ ಇನ್ ಅವರ ಭದ್ರತಾ ಸಲಹೆಗಾರರೊಬ್ಬರು ಕಿಮ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

ಸಿಎನ್ ಎನ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಭದ್ರತಾ ಸಲಹೆಗಾರ ಮೂನ್ ಚುಂಗ್ ಇನ್, ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾರೆ ಹಾಗು ಆರೋಗ್ಯದಿಂದಿದ್ದಾರೆ ಎಂದರು.

ಕಿಮ್ ಜಾಂಗ್ ವೋನ್ಸನ್ ನ ರೆಸಾರ್ಟ್ ಒಂದರಲ್ಲಿ ವಾಸವಾಗಿದ್ದಾರೆ. ಅಲ್ಲಿ ಯಾವುದೇ ಸಂಶಯಾಸ್ಪದ ಚಲನವಲಗಳು ಕಂಡುಬಂದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News