×
Ad

ಲಾಕ್‌ಡೌನ್ ಸಂದರ್ಭದಲ್ಲಿ ಮೆಹಂದಿ ಅಭಿಯಾನ: ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಜಾಲತಾಣದಲ್ಲಿ ಆಕ್ರೋಶ

Update: 2020-04-27 20:43 IST

ಕಾರ್ಕಳ, ಎ.27: ‘ಶಾಸಕರೇ, ಲಾಕ್‌ಡೌನ್ ಸಂದರ್ಭದಲ್ಲಿ ಮೆಹಂದಿ ಅಭಿಯಾನ ಬೇಕಿತ್ತಾ ?..... ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ಹೀಗೊಂದು ಆಕ್ರೋಶಭರಿತ ನುಡಿ ನೆಟ್ಟಿಗರಿಂದ ಜೋರಾಗಿ ಕೇಳಿಬರುತ್ತಿದೆ.

ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಇದರ ವತಿಯಿಂದ ನಡೆಸಲ್ಪಡುವ ‘ಮನೆಮನೆಗಳಲ್ಲಿ ಮೆಹಂದಿ ಅಭಿಯಾನ’ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಕೊರೋನದಿಂದಾಗಿ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಣೆಯಾಗಿದ್ದು ಜನಸಾಮಾನ್ಯರೆಲ್ಲಾ ಮನೆಯೊಳಗಡೆ ಬಂಧಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಡವರ್ಗದ ಜನರಿಗೆ ನೆರವಾಗುವುದು ಬಿಟ್ಟು ‘ಮನೆ-ಮನೆಯಲ್ಲಿ ನಮ್ಮವರೊಂದಿಗೆ ಮೆಹಂದಿ ಬಿಡಿಸೋಣ’ ಎಂದು ಜನರಿಗೆ ಸಂದೇಶ ಕೊಡುವುದು ಎಷ್ಟು ಸರಿ ಎಂಬಂತೆ ಟ್ವೀಟ್‌ಗಳು ವಿವಿಧ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿವೆ.

‘ಚೌಕಬಾರ ಆಡಿದ್ದು ಆಯ್ತು. ಈಗ ಮೆಹೆಂದಿ... ಆಮೇಲೆ ಕುಂಟಾಬಿಲ್ಲೆ... ಹೀಗೆ ಮುಂದುವರಿಯಲಿ. ಎಂಥಾ ಅದ್ಭುತ ಕಲಾ ಪ್ರತಿಭೆ ಸರ್... ನಿಜಕ್ಕೂ ನಮ್ಮ ಶಾಸಕರು ನಮ್ಮ ಎಮ್ಮೆ...’ ಹನುಮನಗೌಡ ಪೊಲೀಸ್ ಪಾಟೀಲ್ ಎಂಬವರು ಬರೆದಿದ್ದಾರೆ.

‘ಈಗಿನ ಸಂದರ್ಭದಲ್ಲಿ ಜನರು ಒಪ್ಪೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿಯಲ್ಲಿ ಇದ್ದಾರೆ. ಇವಾಗ ಈ ಮಹಂದಿ ಬಿಡಿಸುವ ಕಾರ್ಯಕ್ರಮ ಅಂತೆ.. ನಿಜವಾಗಿಯೂ ಈಗ ಇದರ ಅಗತ್ಯ ಇದೆಯಾ ?.. ನಮ್ಮ ಶಾಸಕರೇ ಸಾಕು ನಮ್ಮನ್ನು ಮೂರ್ಖರನ್ನಾಗಿಸೋಕೆ...’ ಎಂದು ಪ್ರದೀಪ್ ಶೆಟ್ಟಿ ಎಂಬವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News