×
Ad

ಮಸೀದಿಯಲ್ಲಿ ಇಫ್ತಾರ್ ಕೂಟ, ತರಾವಿಹ್ ನಮಾಝ್ ನಿರ್ಬಂಧ

Update: 2020-04-27 21:19 IST

ಉಡುಪಿ, ಎ.27: ಕೋವಿಡ್ 19 ಹರಡದಂತೆ ತಡೆಗಟ್ಟಲು ಜಾರಿ ಯಲ್ಲಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಂಝಾನ್ ತಿಂಗಳಲ್ಲಿ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆ ಹಾಗೂ ತರಾವಿಹ್ ನಮಾಝ್ ನಿರ್ವಹಿಸು ವುದನ್ನು ನಿರ್ಬಂಧಿಸ ಲಾಗಿದೆ ಎಂದು ಉಡುಪಿ ಜಿಲ್ಲಾ ವಕ್ಫ್ ಕಚೇರಿ ಪ್ರಕಟಣೆ ತಿಳಿಸಿದೆ.

ಆದುದರಿಂದ ಮನೆಯಲ್ಲಿಯೇ ಇದ್ದುಕೊಂಡು ಉಪವಾಸ ಆಚರಣೆ ಮಾಡಿ, ನಮಾಝ್ ನಿರ್ವಹಿಸಬೇಕು ಮತ್ತು ಕೋವಿಡ್ ಸೋಂಕಿನ ನಿವಾರಣೆ ಗಾಗಿ ಪ್ರಾರ್ಥಿಸಬೇಕು. ಅದೇ ರೀತಿ ಇಫ್ತಾರ್ ಕೂಟ ಏರ್ಪಡಿಸುವುದಾಗಲಿ, ಮಸೀದಿಯ ಸುತ್ತಮುತ್ತ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯು ವುದಾಗಲಿ ಮತ್ತು ಯುವಕರು ರಾತ್ರಿ ರಸ್ತೆ, ಬೀದಿ, ಮೊಹಲ್ಲಾ ಹಾಗೂ ವೃತ್ತ ಗಳಲ್ಲಿ ಸವಾರಿಯೊಂದಿಗೆ ಅನಾವಶ್ಯಕವಾಗಿ ಓಡಾಡು ವುದಾಗಲಿ ಮಾಡ ಬಾರದು ಎಂದು ಸಮಿತಿ ತಿಳಿಸಿದೆ.

ಸರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಡಳಿತದಿಂದ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದ ಹಿತದೃಷ್ಠಿಯನ್ನು ಕಾಪಾಡುವ ಮೂಲಕ ಶಾಂತಿಯುತವಾಗಿ ರಂಝಾನ್ ಉಪ ವಾಸವನ್ನು ಆಚರಿಸಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News