×
Ad

ಮಂಗಳೂರು: ಮೃತ ವಲಸೆ ಕಾರ್ಮಿಕನ ಅಂತ್ಯಕ್ರಿಯೆ ನೆರವೇರಿಸಿದ ಎ1 ಕ್ಯಾಬ್ಸ್ ತಂಡ

Update: 2020-04-28 17:09 IST

ಮಂಗಳೂರು, ಎ.28: ಲಾಕ್‌ಡೌನ್ ಮಧ್ಯೆ ಸೋಮವಾರ ಮೃತಪಟ್ಟ ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕ  ಫೈಝ್ (20) ನನ್ನು ಎ1 ಕ್ಯಾಬ್ಸ್ ತಂಡ ದಫನ ಕಾರ್ಯ ನೆರವೇರಿಸಿ ಗಮನ ಸೆಳೆದಿದೆ.

ಬರೇಲಿಯ ಈ ಯುವಕ ಅನಾರೋಗ್ಯದ ಕಾರಣ ನಗರದ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎ1 ರಿಯಾಝ್ ಕಣ್ಣೂರು ನೇತೃತ್ವದ ತಂಡದ ಸಮಾಜ ಸೇವಕರಾದ ನಿಝಾರ್ ಕಣ್ಣೂರು, ಮುನೀರ್ ಕಣ್ಣೂರು, ನೌಶಾದ್ ಕಣ್ಣೂರು, ರಝಾಕ್ ಕಣ್ಣೂರು, ಡಿಎಂ ರಝಾಕ್ ಕಣ್ಣೂರು, ರಫೀಕ್ ಕಣ್ಣೂರು, ಎಸ್‌ಡಿ ಶಾಕಿರ್ ಕಣ್ಣೂರು, ಹಫೀಝ್ ಕಣ್ಣೂರು, ಶಾಬಾಸ್ ಕಣ್ಣೂರು, ಸುಲ್ತಾನ್ ಕಣ್ಣೂರು, ಈಚು ಕಣ್ಣೂರು, ಅಬೂಬಕ್ಕರ್ ಕಣ್ಣೂರು,  ಸೋಷಿಯಲ್  ಫಾರೂಕ್ ತಲಪಾಡಿ, ಆ್ಯಂಬುಲೆನ್ಸ್ ಚಾಲಕ ಸೈಫು ಕಣ್ಣೂರು ಅವರ ನೆರವಿನೊಂದಿಗೆ ಬದ್ರಿಯಾ ಜಮಾ ಮಸೀದಿಯ ಕಬರಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಿದರು.

ಬದ್ರಿಯಾ ಜಮಾ ಮಸೀದಿಯ ಆಡಳಿತ ಕಮಿಟಿಯವರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿ ಸಹಕರಿಸಿದ್ದರು. ಇಂಡಿಯನಾ ಆಸ್ಪತ್ರೆಯ ಮ್ಯಾನೇಜರ್ ಮುಹಮ್ಮದ್ ಶಾಕೀರ್ ಮತ್ತು  ಆಶಿಷ್ ಅತ್ತಾವರ ಆಸ್ಪತ್ರೆಗೆ ಸಂಬಂಧಿಸಿದ ಮತ್ತು ಫಳ್ನೀರ್ ನಿವಾಸಿ ಮೆಹಶೂಕ್ ಇನ್ನಿತರ ವಿಚಾರದಲ್ಲಿ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News