ಬಂಟ್ವಾಳ ಪೊಲೀಸರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವಿತರಣೆ
Update: 2020-04-28 18:26 IST
ಬಂಟ್ವಾಳ, ಎ.28: ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ನಿರಂತರ ಕರ್ತವ್ಯದಲ್ಲಿ ತೊಡಗಿರುವ ಪೊಲೀಸರಿಗೆ ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ದೇವಿ ಮೆಡಿಕಲ್ಸ್ ಸಹಯೋಗದಲ್ಲಿ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಗಳನ್ನು ಮಂಗಳವಾರ ವಿತರಿಸಲಾಯಿತು.
ಬಂಟ್ವಾಳ ಗ್ರಾಮಾಂತರ ಠಾಣೆಗೆ ಪೊಲೀಸ್ ವೃತ್ತ ನೀರಿಕ್ಷಕ ಟಿ.ಡಿ.ನಾಗರಾಜ್ ಅವರ ಮೂಲಕ, ನಗರ ಠಾಣೆಗೆ ಇಲ್ಲಿನ ಎಸ್ಸೈ ಅವಿನಾಶ್ ಅವರ ಮೂಲಕ ಮತ್ತು ಬಂಟ್ವಾಳ ಸಂಚಾರ ಠಾಣೆಗೆ ಎಸ್ಸೈ ರಾಜೇಶ್ ಕೆ.ವಿ. ಅವರ ಮೂಲಕ ಠಾಣೆಗಳ ಸಿಬ್ಬಂದಿಗೆ ಅಗತ್ಯವಿರುವಷ್ಟು ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ಅಧ್ಯಕ್ಷ ವೀರ್ ಸುದರ್ಶನ್ ಜೈನ್, ಕಾರ್ಯದರ್ಶಿ ವೀರ್ ಸುಭಾಷ್ ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೀರ್ ಡಾ. ಸುದೀಪ್ ಕುಮಾರ್, ಕಾರ್ಯದರ್ಶಿ ವೀರಾಂಗನಾ ಸನ್ಮತಿ ಜಯಕೀರ್ತಿ, ಉಪಾಧ್ಯಕ್ಷ ಹರ್ಷರಾಜ್ ಬಲ್ಲಾಳ್ ಉಪಸ್ಥಿತರಿದ್ದರು.