×
Ad

ಕಾಂಗ್ರೆಸ್ ಕಾರ್ಯಾಪಡೆಗೆ ಉಡುಪಿಯ ಮಠಗಳಿಂದ ನೆರವು

Update: 2020-04-28 21:33 IST

ಉಡುಪಿ, ಎ.28: ಪೇಜಾವರ ಮಠದ ವತಿಯಿಂದ ಬಡವರಿಗೆ ವಿತರಿಸಲು 250 ಆಹಾರ ಕಿಟ್ಗಳನ್ನು ಕೊರೋನಾ ಸಂಕಷ್ಟ ಪರಿಹಾರ ಕಾರ್ಯಪಡೆಯ ಜಿಲ್ಲಾಧ್ಯಕ್ಷ ಯು.ಆರ್. ಸಭಾಪತಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಕೆ.ಶ್ರೀನಿವಾಸ ಹೆಬ್ಬಾರ್, ಬಾಲಕೃಷ್ಣ ಶೆಟ್ಟಿ, ಸುಂದರ್, ಕೃಷ್ಣ ಮೂಲ್ಯ ಮತ್ತು ಮಠದ ಪರವಾಗಿ ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

ಅದೇ ರೀತಿ ಈ ಕಾರ್ಯಾಪಡೆಗೆ ಪುತ್ತಿಗೆ ಮಠದ ಶ್ರೀಸುಗಣೇಂದ್ರ ತೀರ್ಥ ಸ್ವಾಮೀಜಿ 50 ಕಿಟ್ ಮತ್ತು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಎರಡು ಟನ್ ಬೆಳ್ತಿಗೆ ಅಕ್ಕಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಹೆಬ್ಬಾರ್ ಕಡಿಯಾಳಿ ಹಾಗೂ ಮಠದ ಸಿಬ್ಬಂದಿ ಗಳು ಜೊತೆಗೆ ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News