×
Ad

ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯದಿಂದ ಆನ್‌ಲೈನ್ ತರಗತಿಗೆ ಚಾಲನೆ

Update: 2020-04-28 22:01 IST

ಉಡುಪಿ, ಎ.28: ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯ ಈಗಾಗಲೇ ಆನ್‌ಲೈನ್ ವ್ಯವಸ್ಥೆಗೆ ತೆರೆದುಕೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವೂ ಆನ್‌ಲೈನ್ ತರಗತಿಗಳನ್ನು ಸೋಮವಾರದಿಂದ ಆರಂಭಿಸಿದೆ.

ಕೊರೋನ ಲಾಕ್‌ಡೌನ್ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಅಣಿಯಾಗುತ್ತಿದ್ದು ಇದರಿಂದ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಕರಾಮು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಆನ್‌ಲೈನ್ ತರಗತಿಗಳು ಪ್ರಾರಂಭಗೊಂಡಿವೆ. ಮೊದಲ ಬ್ಯಾಚ್‌ನಲ್ಲಿ ಕೆಸೆಟ್ ಪರೀಕ್ಷೆಳಿಗೆ ತರಬೇತಿ ಪ್ರಾರಂಭಗೊಂಡಿದೆ.

ದೇಶದಲ್ಲಿ ಬಹಳಷ್ಟು ವಿಶ್ವದ್ಯಾನಿಲಯಗಳು ಆನ್‌ಲೈನ್ ತರಗತಿ ಆರಂಭಿಸಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶ್ವದ್ಯಾಲಯ ಆನ್‌ಲೈನ್ ತರಗತಿ ಈಗ ಆರಂಭಿಸುತ್ತಿ ರುವುದು ಇದೇ ಮೊದಲು ಎಂದು ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News