68 ಸಾವಿರ ಕೋಟಿ ರೂ. ಬಾಕಿ ಉಳಿಸಿದವರ ಹೆಸರುಗಳನ್ನು ಸರಕಾರವು ಬಚ್ಚಿಟ್ಟಿತ್ತು: ರಾಹುಲ್ ಗಾಂಧಿ

Update: 2020-04-28 16:39 GMT

ಹೊಸದಿಲ್ಲಿ, ಎ.28: ಸಂಸತ್ತಿನಲ್ಲಿ ಸರಕಾರವು ಉದ್ದೇಶಪೂರ್ವಕ ಬ್ಯಾಂಕ್ ಸುಸ್ತಿದಾರರ ಹೆಸರುಗಳನ್ನು ಬಚ್ಚಿಟ್ಟಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.

 ಅಗ್ರ 50 ಬ್ಯಾಂಕ್ ಕಳ್ಳರ ಹೆಸರುಗಳ ಪಟ್ಟಿಯನ್ನು ನೀಡುವಂತೆ ತಾನು ಮಾ.16ರಂದು ಲೋಕಸಭೆಯಲ್ಲಿ ವಿತ್ತ ಸಚಿವರನ್ನು ಕೇಳಿಕೊಂಡಿದ್ದೆ. ಆದರೆ ಅದಕ್ಕೆ ಉತ್ತರಿಸಲು ಅವರು ನಿರಾಕರಿಸಿದ್ದರು. ಈಗ ಆರ್‌ಬಿಐ ನೀರವ್ ಮೋದಿ, ಮೆಹುಲ್ ಚೋಕ್ಸಿ, ಎಲ್ಲ ಬಿಜೆಪಿ ಮಿತ್ರರ ಪಟ್ಟಿಯನ್ನು ನೀಡಿದೆ. ಇದೇ ಕಾರಣದಿಂದ ಸಂಸತ್ತಿನಲ್ಲಿ ಸತ್ಯವನ್ನು ಬಚ್ಚಿಡಲಾಗಿತ್ತು ಎಂದು ರಾಹುಲ್ ಮಂಗಳವಾರ ಟ್ವೀಟಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸಿಂಗ್ ಸುರ್ಜೆವಾಲಾ ಅವರು,ದೇಶಭ್ರಷ್ಟರಿಗೆ ನೆರವಾಗುವುದು ಮತ್ತು ಅವರ ಸಾಲಗಳನ್ನು ಮನ್ನಾ ಮಾಡುವುದು ಬಿಜೆಪಿಯ ಮುಖ್ಯ ಅಜೆಂಡಾ ಆಗಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News