×
Ad

ಆದಿಉಡುಪಿಯಲ್ಲಿ ಪೊಲೀಸರೊಂದಿಗೆ ಯೋಧರ ವಾಗ್ವಾದದ ಹಳೆ ವೀಡಿಯೊ ವೈರಲ್

Update: 2020-04-28 23:14 IST

ಉಡುಪಿ : ಲಾಕ್ ಡೌನ್ ಉಲ್ಲಂಘಿಸಿ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಆಡದಂತೆ ಸೂಚನೆ ನೀಡಿದ ಪೊಲೀಸ ರೊಂದಿಗೆ ಯೋಧರು ವಾಗ್ವಾದಕ್ಕಿಳಿದ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾರ್ಚ್ ಅಂತ್ಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಆದಿಉಡುಪಿ ಹೆಲಿಪ್ಯಾಡ್ ನಲ್ಲಿರುವ ಭಾರತೀಯ ಭೂ ಸೇನೆಗೆ ಸಂಬಂಧಿಸಿದ ಜಾಗ ಕೂಡ ಇದ್ದು ಇಲ್ಲಿ ಸಂಜೆ ವೇಳೆ ಯೋಧರು ವ್ಯಾಯಾಮ ಮಾಡುತ್ತಿದ್ದರೆನ್ನಲಾಗಿದೆ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಯೋಧರಿಗೆ ಲಾಕ್ ಡೌನ್ ವಿಚಾರವನ್ನು ಮನದಟ್ಟು ಮಾಡಿದರೆನ್ನಲಾಗಿದೆ ಆದರೆ ಪೊಲೀಸರ ಮಾತು ಕೇಳಲು ಸಿದ್ಧರಿಲ್ಲದ ಯೋಧರು ಅವರೊಂದಿಗೆ ವಾಗ್ವಾದಕ್ಕಿಳಿದರು.

ಅದರ ನಂತರವೂ ಆಟ ಮುಂದುವರಿಸಿದ ಯೋಧರಿಗೆ ಕೆಲವು ದಿನಗಳ ಬಳಿಕ ನಗರಸಭೆ ಅಧಿಕಾರಿಗಳು ಸೂಚನೆ ನೀಡಲಾಗಿದ್ದು, ಇದೀಗ ಅಲ್ಲಿ ಯಾರು ಕೂಡ ಆಟವಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಆದರೆ ಈ ವಾಗ್ವಾದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News