ಯುರೋ ಬ್ಯಾಂಕ್ ನೋಟ್‌ಗಳಿಂದ ಸೋಂಕು ಅಪಾಯವಿಲ್ಲ: ಬ್ಯಾಂಕ್

Update: 2020-04-28 18:07 GMT

ಫ್ರಾಂಕ್‌ಫರ್ಟ್ (ಜರ್ಮನಿ), ಎ. 28: ಯುರೋ ಬ್ಯಾಂಕ್ ನೋಟ್‌ಗಳಿಂದ ಕೊರೋನವೈರಸ್ ಸೋಂಕಿಗೆ ಒಳಗಾಗುವ ಗಂಭೀರ ಅಪಾಯವೇನೂ ಇಲ್ಲ ಎಂದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮಂಗಳವಾರ ಹೇಳಿದೆ.

ಪ್ರಯೋಗಾಲಯ ಫಲಿತಾಂಶಗಳನ್ನು ಉಲ್ಲೇಖಿಸಿ ಅದು ಈ ಹೇಳಿಕೆ ನೀಡಿದೆ. ಇತರ ವಸ್ತುಗಳಲ್ಲಿ ಕ್ರಿಮಿಗಳು ಹೆಚ್ಚು ಸಮಯ ಇರುವುದು ಪರೀಕ್ಷೆಯಲ್ಲಿ ತಿಳಿದು ಬಂದಿದೆ.

19 ದೇಶಗಳ ಯುರೋರೆನ್‌ನಲ್ಲಿ ನಗದು ಹಣವನ್ನು ಈಗಲೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ, ಸೋಂಕಿತ ವ್ಯಕ್ತಿ ಮುಟ್ಟಿರುವ ನೋಟುಗಳನ್ನು ಸ್ಪರ್ಶಿಸುವುದನ್ನು ತಡೆಯಲು ಕಾರ್ಡ್‌ಗಳು ಅಥವಾ ಇತರ ಸಂಪರ್ಕರಹಿತ ಪಾವತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ ಹೆಚ್ಚಿನ ಅಂಗಡಿಗಳು ಮತ್ತು ಉದ್ಯಮಗಳು ಗ್ರಾಹಕರಿಗೆ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News