×
Ad

ಕೊರೋನ ಭಯದಿಂದ ಜನರಿಂದ ದೂರ ಉಳಿದ ಕಿಮ್: ದ. ಕೊರಿಯ ಸಚಿವ

Update: 2020-04-28 23:44 IST

ಸಿಯೋಲ್ (ದಕ್ಷಿಣ ಕೊರಿಯ), ಎ. 28: ಕೊರೋನವೈರಸ್ ಸೋಂಕಿಗೆ ತುತ್ತಾಗುವ ಭಯದಿಂದಾಗಿ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರಕಾರಿ ಸಮಾರಂಭಗಳಿಂದ ಹಾಗೂ ಸಾರ್ವಜನಿಕರಿಂದ ದೂರ ಉಳಿದಿರಬಹುದು ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವ ಕಿಮ್ ಯೋನ್-ಚುಲ್ ಮಂಗಳವಾರ ಹೇಳಿದ್ದಾರೆ.

ಎಪ್ರಿಲ್ 15ರಂದು ನಡೆದ ತನ್ನ ಅಜ್ಜ ಹಾಗೂ ಉತ್ತರ ಕೊರಿಯದ ಸ್ಥಾಪಕ ಕಿಮ್ ಇಲ್ ಸುಂಗ್‌ರ ಜನ್ಮ ದಿನಾಚರಣೆ ಕಾರ್ಯಕ್ರಮದಿಂದ ಅವರು ದೂರ ಉಳಿದಿರುವುದು ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ. ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದಾಗಿ ಕೆಲವು ವರದಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News