×
Ad

ಕಿನ್ನಿಗೋಳಿ : ದಂಪತಿಯ ಬರ್ಬರ ಹತ್ಯೆ; ಆರೋಪಿ ಸೆರೆ

Update: 2020-04-29 12:12 IST

ಮಂಗಳೂರು : ಹಾಡುಹಗಲಲ್ಲೇ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಿನ್ನಿಗೋಳಿ ಏಳಿಂಜೆಯಲ್ಲಿ ಇಂದು ನಡೆದಿದೆ.

ಮೃತರನ್ನು ವಿನ್ಸೆಂಟ್ ಡಿಸೋಜ (48) ಮತ್ತು ಅವರ ಪತ್ನಿ ಹೆಲಿನ್ ಡಿಸೋಜ (43) ಎಂದು ಗುರುತಿಸಲಾಗಿದೆ.

ನೆರೆ ಮನೆಯ ಅಲ್ಫನ್ಸ್ ಸಲ್ಡಾನ (51) ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆ ಪಕ್ಕದ ಜಾಗದ ತಕರಾರಿನ ಹಿನ್ನೆಲೆಯಲ್ಲಿ ಆರೋಪಿ ಅಲ್ಫನ್ಸ್ ಸಲ್ಡಾನ ಪಿಕ್ಕಾಸು ಹಾಗೂ ಹಾರೆಯಿಂದ ದಂಪತಿಗೆ ಗಂಭೀರವಾಗಿ ಹಲ್ಲೆ ಮಾಡಿ ಮನೆ ಮುಂಭಾಗದಲ್ಲೇ ಬರ್ಬರವಾಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News