ಬಾಕಿ ಇರುವ 10, 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಗಳನ್ನು ನಡೆಸಲು ಸಿದ್ಧ:ಕೇಂದ್ರ ಸರಕಾರ
ಹೊಸದಿಲ್ಲಿ: ಕೊರೋನ್ ವೈರಸ್‌ದಿಂದಾಗಿ ಉಂಟಾದ ಲಾಕ್‌ಡೌನ್ ಹಿಂಪಡೆದ ಬಳಿಕ ಬಾಕಿ ಇರುವ 10 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ನಾವು ಸಿದ್ಧರಿದ್ದೇವೆ. 'ಮೊದಲ ಸಾಧ್ಯತೆಯ' ಪ್ರಕಾರ ಪದವಿಪೂರ್ವ ಕೋರ್ಸ್‌ಗಳಿಗೆ ತೇರ್ಗಡೆ ಹಾಗೂ ಪ್ರವೇಶಕ್ಕೆ ನಿರ್ಣಾಯಕವಾದ 10 ಹಾಗೂ 12ನೇ ತರಗತಿಯ ಉಳಿದ 29 ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ನಡೆಸುವ ಕನಿಷ್ಟ 10 ದಿನಗಳ ಮೊದಲು ವಿದ್ಯಾರ್ಥಿಗಳಿಗೆ ನೊಟೀಸ್ ನೀಡಲಾಗುವುದು ಎಂದು ಸಿಬಿಎಸ್‌ಇ ಬುಧವಾರ ತಿಳಿಸಿದೆ.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ ಮಾನವ ಸಂಪನ್ಮೂಲ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಈಗಾಗಲೇ ನಡೆದಿರುವ ಪರೀಕ್ಷೆಗಳ ವೌಲ್ಯಮಾಪನ ನಡೆಸುವಂತೆ ನಿರ್ದೇಶನ ನೀಡಿದೆ.
ಸಿಬಿಎಸ್‌ಇ, ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ) ಅಡಿ ಕೆಲಸ ನಿರ್ವಹಿಸುತ್ತಿದೆ.
ಇತ್ತೀಚೆಗೆ 10ನೇ ತರಗತಿಯ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಬಗ್ಗೆ ಸಾಕಷ್ಟು ಉಹಾಪೋಹ ಹರಡಿದೆ. 10 ಹಾಗೂ 12ನೇ ತರಗತಿಯ 29 ವಿಷಯಗಳಿಗೆ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮಂಡಳಿ ನಿರ್ಧಾರವು ಎಪ್ರಿಲ್ 1ರ ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ ಇದೆ ಎಂದು ಪುನರುಚ್ಚರಿಸಲಾಗಿದೆ ಎಂದು ಸಿಬಿಎಸ್‌ಇ ಸಂದೇಶದಲ್ಲಿ ಟ್ವೀಟ್ ಮಾಡಿದೆ.