×
Ad

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2020-04-29 17:42 IST

ಮಂಗಳೂರು, ಎ. 29: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮಂಗಳೂರು ಇದರ ವತಿಯಿಂದ 500 ಕ್ಕೂ ಅಧಿಕ ರಮಝಾನ್ ಕಿಟ್ ಗಳನ್ನು ವಿತರಿಸಲಾಯಿತು.

ಮಂಗಳೂರು ನಗರದ ಎಲ್ಲಾ ಮಸೀದಿಗಳಲ್ಲಿನ ಖತೀಬ್, ಮುಅಝಿನ್, ಮುಅಲ್ಲಿಮರು ಮತ್ತು ಇತರ ಸಿಬ್ಬಂದಿಗಳಿಗೆ ಕಿಟ್ ಗಳನ್ನು ತಲುಪಿಸಲಾಯಿತು. ಅಲ್ಲದೆ ಜಿಲ್ಲೆಯ ಗ್ರಾಮಾಂತರ ಪ್ರದೇಶದ  ವಿವಿಧ ಭಾಗಗಳಲ್ಲಿ ಅತ್ಯಂತ ಅರ್ಹ  ಕುಟುಂಬಗಳಿಗೂ ಕಿಟ್ ಗಳನ್ನು ವಿತರಿಸಲಾಯಿತು. 

ಪ್ರಸಕ್ತ ಲಾಕ್ ಡೌನ್ ಹಿನ್ನೆಲೆಯಲ್ಲಿ, ರಮಝಾನ್ ಕಿಟ್ ಗಳನ್ನು  ಕೇವಲ ಉಪವಾಸಿಗರಿಗೆ ಮಾತ್ರವೆಂದು ನೋಡದೆ, ಅವಶ್ಯಕತೆಯುಳ್ಳ ಎಲ್ಲಾ ವರ್ಗದ ಜನರಿಗೆ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಮಧ್ಯಮ ವರ್ಗಗಳ ಜನರನ್ನೂ ಪರಿಗಣಿಸಿ ವಿತರಿಸಲಾಗಿದೆ. ಅತೀ ಅಗತ್ಯವಿರುವ ಕುಟುಂಬಗಳಿಗೆ  ಸೂಕ್ತ ಪರಿಶೀಲನೆ ನಡೆಸಿ ಕಿಟ್ ವಿತರಣೆಯ ಪ್ರಕ್ರಿಯೆಯನ್ನು  ಮುಂದುವರಿಸಲಾಗುವುದೆಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಇದರ ಅಧ್ಯಕ್ಷರಾದ ಹಾಜಿ ಎಸ್.ಎಂ. ರಶೀದ್ ಅವರು ತಿಳಿಸಿದ್ದಾರೆ.

ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಇದರ ಅಧ್ಯಕ್ಷರಾದ ಹಾಜಿ ಎಸ್.ಎಂ. ರಶೀದ್, ಉಪಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಮ್ತಿಯಾಝ್, ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್, ಕಾರ್ಯದರ್ಶಿ ನಿಸಾರ್ ಫಕೀರ್ ಮಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಮ್ಮದ್ ಶೌಕತ್ ಶೌರಿ, ಮಹಮ್ಮದ್ ಹಾರಿಸ್, ಮಮ್ತಾಝ್ ಅಲಿ ಬಿ.ಎಮ್., ಮಹಮ್ಮದ್ ಶರೀಫ್, ಅಬ್ದುಲ್ ರಝಾಕ್ ಜಿ. ಆಸಿಫ್ ಸೂಫಿ ಖಾನ್ ಮತ್ತು ನಾಸಿರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News