ಜೋಡಿ ಕೊಲೆ: ಘಟನಾ ಸ್ಥಳಕ್ಕೆ ಐವನ್ ಭೇಟಿ
Update: 2020-04-29 18:28 IST
ಮಂಗಳೂರು, ಎ.29: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೊಳಿ ಸಮೀಪದ ಏಳೆಂಜೆ ಎಂಬಲ್ಲಿ ಕೊಲೆಗೀಡಾದ ದಂಪತಿಯ ಮನೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.
ಕೊಲೆಯಾದ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮೃತರ ಕುಟುಂಬಕ್ಕೆ ಸರಕಾರದಿಂದ ಸಹಾಯ ಧನ ಒದಗಿಸುವಂತೆ ಐವನ್ ಡಿಸೋಜ ಆಗ್ರಹಿಸಿದ್ದಾರೆ.