×
Ad

ಬಂದರು ಧಕ್ಕೆಯಲ್ಲೇ ಮೀನು ಮಾರಾಟ ಚಟುವಟಿಕೆ: ಮೀನು ಮಾರಾಟ, ಕಮಿಷನ್ ಏಜಂಟರ ಸಂಘ ಹೇಳಿಕೆ

Update: 2020-04-29 18:32 IST

ಮಂಗಳೂರು, ಎ.29: ಕೊರೋನ-ಲಾಕ್‌ಡೌನ್‌ನಿಂದಾಗಿ ಈ ಹಿಂದೆ ಮತ್ಸೋಧ್ಯಮಕ್ಕೆ ದ.ಕ. ಜಿಲ್ಲಾಡಳಿತ ಷರತ್ತು ಬದ್ಧವಾಗಿ ಬಂದರು ದಕ್ಕೆ ಹೊರಾಂಗಣದಲ್ಲಿ ಅನುಮತಿ ನೀಡಿತ್ತು. ಜನಸಾಂದ್ರತೆ ಅತಿಯಾದ ಕಾರಣದಿಂದ ಸಂಘವು ಮಾರಾಟ ಸ್ಥಗಿತ ಗೊಳಿಸಿತ್ತು. ಈ ಮಧ್ಯೆ ಹೊರ ರಾಜ್ಯದ ಮೀನು ಸಾಗಾಟದ ವಾಹನವನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಜನ ಜಮಾವಣೆ ಯಿಂದಾಗಿ ಸೋಂಕು ನಿಯಂತ್ರಣದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸಂಘವು ಸಭೆ ಸೇರಿ ಮುಂದೆ ನಿಯಮಾನುಸಾರ ಬಂದರು ದಕ್ಕೆಯಲ್ಲೇ ಮೀನು ಮಾರಾಟ ಚಟುವಟಿಕೆ ನಡೆಸಲು ತೀರ್ಮಾನಿಸಿದೆ.

ಬಂದರು ಧಕ್ಕೆಯ ಹೊರಾಂಗಣದಲ್ಲಿ ಖರೀದಿಗೆ ಅಧಿಕ ಜನರು ಜಮಾವಣೆಗೊಳ್ಳುವುದರಿಂದ ನಿಯಂತ್ರಣ ಅಸಾಧ್ಯವಾಗಿದೆ. ಸುರಕ್ಷಿತ ಅಂತರವನ್ನೂ ಗ್ರಾಹಕರು ಪಾಲಿಸದ ಕಾರಣ ಹಸಿ ಮೀನು ಮಾರಾಟಗಾರರು ಮತ್ತು ಕಮಿಷನ್ ಏಜೆಂಟ್ ಸಂಘವು ಕೆಲವು ದಿನಗಳ ಹಿಂದೆಯೇ ವ್ಯಾಪಾರ ನಿಲ್ಲಿಸಿತ್ತು.

ಸಭೆಯಲ್ಲಿ ಅಧ್ಯಕ್ಷ ಸಿ.ಎಂ.ಮುಸ್ತಫ, ಪದಾಧಿಕಾರಿಗಳಾದ ಕೆ.ಇ.ರಶೀದ್, ಭರತ್ ಭೂಷಣ್, ಮಾಜಿ ಮೇಯರ್ ಕೆ.ಅಶ್ರಫ್, ಪಿ.ಪಿ.ಹಾಜಿ ಇಶಾಕ್, ಕೆ.ಎಂ.ಇಬ್ರಾಹೀಂ, ಜೆ.ಬಿ. ಶಿವ, ಕೆ.ಬಿ.ಎಸ್.ಸಾಲಿ, ಕೆ.ಎ.ಬಾವ, ಕೆ.ಎಂ.ಎ.ಮುಸ್ತಫ, ಎಸ್.ಎ.ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News