×
Ad

ಕೇಂದ್ರ ಸರಕಾರದಿಂದ ಮೂರು ತಿಂಗಳ ಪಿಎಫ್ ವಂತಿಗೆ ಪಾವತಿ

Update: 2020-04-29 20:56 IST

ಉಡುಪಿ, ಎ.29: ನೂರು ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಪಿಎಫ್ ವಂತಿಗೆಯನ್ನು ಕೇಂದ್ರ ಸರಕಾರ ಭರಿಸಲಿದೆ ಎಂದು ಉಡುಪಿ ಪ್ರಾದೇಶಿಕ ಪಿ.ಎಫ್ ಕಚೇರಿಯ ಪ್ರಾದೇಶಿಕ ಆಯುಕ್ತ ಡಾ.ಅಜಯ್ ಸಿಂಗ್ ಚೌಧರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಶತ 90ರಷ್ಟು ಉದ್ಯೋಗಿಗಳ ತಿಂಗಳ ವೇತನ 15,000 ರೂ. ಗಿಂತ ಕಡಿಮೆ ಇರಬೇಕು. ಶೇ.100ರಷ್ಟು ಉದ್ಯೋಗಿ ಗಳ ಕೆ.ವೈ.ಸಿ (ಕೆವೈಸಿ- ಆಧಾರ್) ಮತ್ತು ಉದ್ಯೋಗದಾತರ ಪೂರ್ಣ ಮಾಹಿತಿ ಎಲೆಕ್ಟ್ರಾನಿಕ್ ಮುಖಾಂತರ (ಫಾರ್ಮ್ 5ಎ) ನಮೂದಿಸಿರಬೇಕು.ಇಂತಹ ಉದ್ಯೋಗಿಗಳ ವೇತನದ ಶೇ.24ರಷ್ಟು ಪಿ.ಎಫ್ ವಂತಿಗೆಯನ್ನು ಕೇಂದ್ರ ಸರಕಾರವು ಮೂರು ತಿಂಗಳವರೆಗೆ (ಮಾರ್ಚ್, ಎಪ್ರಿಲ್, ಮೇ ತಿಂಗಳ ವೇತನ) ಪಾವತಿಸಲಿದೆ.

ಪರಿಹಾರ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಒಳಗೊಂಡ ತಂತ್ರಾಂಶ ವನ್ನು ಇಪಿಎಫ್‌ಓ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇ.ಸಿ.ಆರ್) ವ್ಯವಸ್ಥೆ ಜಾರಿಗೊಳಿಸಿದ್ದು, ಈ ವ್ಯವಸ್ಥೆಯು ಸಂಬಂಧಪಟ್ಟ ಕಾರ್ಖಾನೆಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಪರಿಹಾರವನ್ನು ಪಡೆಯಲು ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಇ.ಪಿ.ಎಫ್ ಓ ಕೋವಿಡ್-19 ಟ್ಯಾಬ್‌ನಲ್ಲಿ ಗಮನಿಸಬಹುದು ಎಂದವರು ತಿಳಿಸಿದ್ದಾರೆ.

ಈಗಾಗಲೇ ಭವಿಷ್ಯನಿಧಿ ಕಚೇರಿ ಮುಖಾಂತರ ಅರ್ಹ ಉದ್ಯೋಗದಾತರಿಗೆ ಇಮೇಲ್ ಮೂಲಕ ಸಂದೇಶವನ್ನು ರವಾನಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಗಾಗಿ ಉಡುಪಿ ಕಾರ್ಯಾಲಯದ ದೂರವಾಣಿ ಸಂಖ್ಯೆ 0824-2531172/2531174 ಮತ್ತು ಇ-ಮೇಲ್ sro.udupi@epfndia.gov.in  ಸಂಪರ್ಕಿಸು ವಂತೆ ಉಡುಪಿ ಪ್ರಾದೇಶಿಕ ಭವಿಷ್ಯ ನಿಧಿ ಆುುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News