×
Ad

ಬ್ರಹ್ಮಾವರ: ಜಯಂಟ್ಸ್‌ನಿಂದ ದಲಿತರಿಗೆ ಆಹಾರದ ಕಿಟ್ ವಿತರಣೆ

Update: 2020-04-29 21:01 IST

 ಬ್ರಹ್ಮಾವರ, ಎ.29: ಸ್ಥಳೀಯ ಜಯಂಟ್ಸ್ ಗ್ರೂಪ್ಸ್, ಸುವರ್ಣ ಎಂಟರ್ ಪ್ರೈಸಸ್ ಮತ್ತು ಬ್ರಹ್ಮಾವರ ಸಮುದಾಯಗಳಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಸುತ್ತಮುತ್ತಲಿನ ಪರಿಶಿಷ್ಠ ವರ್ಗದ ನಿವಾಸಿಗಳ ಮನೆ ಮನೆಗೆ ತೆರಳಿ ಆಹಾರ ಸಾಮಾಗ್ರಿಗಳ ಕಿಟ್ಳನ್ನು ಇತ್ತೀಚೆಗೆ ವಿತರಿಸಲಾಯಿತು.

ಅಲ್ಲದೇ ಬ್ರಹ್ಮಾವರದ ಅಪ್ಪ-ಅಮ್ಮ ಅನಾಥಾಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಹಾಗೂ ಕೊಳಲಗಿರಿಯ ವಿಕಲಚೇತನರ ವಸತಿ ನಿಲಯದ ನಿವಾಸಿಗಳಿಗೂ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ ಡಾ.ಅಜಿತ್ ಕುಮಾರ್ ಶೆಟ್ಟಿ, ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಅಣ್ಣಯ್ಯದಾಸ್, ಕಾರ್ಯಕಾರಿ ನಿರ್ವಾಹಕ ಶ್ರೀನಾಥ್ ಕೋಟ, ಸುವರ್ಣಎಂಟಪ್ರೈಸಸ್‌ನ ಮಾಲಕಿ ಸುನೀತಾ ಮಧುಸೂಧನ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News