ಕೋಡಿ: 155 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ
Update: 2020-04-29 21:04 IST
ಕುಂದಾಪುರ, ಎ.29: ಕೋಡಿ ಮೊಹಿದ್ದೀನ್ ಜುಮಾ ಮಸೀದಿ ಹಾಗೂ ಎಂಜೆಎಂ ಯಂಗ್‌ಮೆನ್ಸ್ ವತಿಯಿಂದ ರಂಝಾನ್ ಕಿಟ್ ವಿತರಣೆ ಕಾರ್ಯ ಕ್ರಮಕ್ಕೆ ಹಯಾತುಲ್ ಇಸ್ಲಾಂ ಮದರಸದಲ್ಲಿ ಜಮಾತಿನ ಅಧ್ಯಕ್ಷ ಜಿ.ಎಂ. ಮುಸ್ತಫಾ ಅಧ್ಯಕ್ಷತೆ ಹಾಗೂ ಝೈನಿ ಉಸ್ತಾದ್ ಅವರ ದುವಾದೊಂದಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಯಂಗ್‌ಮೆನ್ಸ್ ಕಮಿಟಿಯ ಅಧ್ಯಕ್ಷ ಮುಖ್ತಾರ್ ಕಟಪಾಡಿ, ಜಮಾತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಕೆ.ಎಸ್., ಹಿರಿಯ ಸದಸ್ಯ ರಾದ ಮಜೀದ್ ಯಾಕೂಬ್, ರಫೀಕ್ ಗುಂಡ್ಮಿ, ಶರ್ಪುದ್ದೀನ್ ಕಟಪಾಡಿ, ಝಮೀರ್ ಬೆಳ್ವೆ, ಮುನಾಫ್ ಕೋಡಿ ವೊದಲಾದವರು ಉಪಸ್ಥಿತರಿದ್ದರು.
ತದನಂತರ ಕೋಡಿ, ಕೋಟೆ, ಹಳಹಳ್ವೆ, ಬೀಜಾಡಿ, ಕೋಟೇಶ್ವರ, ಮಾರ್ಕೋಡ್, ತೆಕ್ಕಟ್ಟೆಯಲ್ಲಿರುವ ಜಮಾತಿಗೆ ಒಳಪಟ್ಟ ಸುಮಾರು 155 ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಯಿತು. ಯಂಗ್‌ಮೆನ್ಸ್ ಕಾರ್ಯದರ್ಶಿ ಆಸಿಫ್ ಮಸೂದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುನಾಫ್ ಕೋಡಿ ವಂದಿಸಿದರು