ಉಡುಪಿಯಲ್ಲಿ ರಕ್ತದಾನ ಶಿಬಿರ -ಅಭಿಯಾನಕ್ಕೆ ಚಾಲನೆ
ಉಡುಪಿ, ಎ. 29: ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ, ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಉಡುಪಿ ಜಿಲ್ಲಾ ಘಟಕ, ಕರ್ನಾಟಕ ಜರ್ನಲಿಸ್ಟ್ ಯೂನಿ ಯನ್ ಜಿಲ್ಲಾ ಘಟಕ ಉಡುಪಿ, ಜಯಂಟ್ಸ್ ಗ್ರೂಪ್ ಉಡುಪಿ, ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ ಗಂಗೊಳ್ಳಿ ಇವುಗಳ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಮತ್ತು ಅಭಿಯಾನಕ್ಕೆ ಬುಧವಾರ ಉಡುಪಿ ಅಜ್ಜರಕಾಡು ವಿನಲ್ಲಿರುವ ನೂತನ ಗ್ರಂಥಾಲಯ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಈ ಅಭಿಯಾನವನ್ನು ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಉದ್ಘಾಟಿಸಿದರು. ಉಡುಪಿ ಶಾಸಕ ರಘುಪತಿ ಭಟ್ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ ಪಾಲ್ ಸುವರ್ಣ, ರಕ್ತದಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿವಾಕರ ಖಾರ್ವಿ ಗಂಗೊಳ್ಳಿ ಅವರನ್ನು ಗೌರವಿಸಿದರು.
ಸರಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾ ಎನ್‌ಪಿಎಸ್ ಸಂಘಟನೆಯ ಅಧ್ಯಕ್ಷ ರಾಘವ ಶೆಟ್ಟಿ ಪಡುಮುಂಡು, ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಶಶಿಧರ ಹೆಮ್ಮಣ್ಣ, ಕಾರ್ಯದರ್ಶಿ ಸುಜೀತ್, ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಉಡುಪಿ ಜಯಂಟ್ಸ್ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್, ಕಾರ್ಯದರ್ಶಿ ಯಶವಂತ ಸಾಲಿಯಾನ್, ತೇಜಸ್ವರ ರಾವ್, ಕಾರ್ಯಕ್ರಮದ ಸಂಯೋಜಕರಾದ ದೇದಾಸ್ ಕಾಮತ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಈ ಅಭಿಯಾನವು ಮೇ 1 ಮತ್ತು ಮೇ 4ರಂದು ನಡೆಯ ಲಿದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಬ್ಲಡ್ ಡೋನರ್ ಪಾಸ್ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.