ಬಂಟ್ವಾಳ ಪೇಟೆಗೆ ರಮಾನಾಥ ರೈ ಭೇಟಿ
Update: 2020-04-29 21:48 IST
ಬಂಟ್ವಾಳ, ಎ.29: ನಾಲ್ವರಲ್ಲಿ ಕೊರೋನ ಸೋಂಕು ಪಾಸಿಟಿವ್ ಆಗಿರುವುದರಿಂದ ಸೀಲ್ ಡೌನ್ ಆಗಿರುವ ಬಂಟ್ವಾಳ ಪೇಟೆ ಪ್ರದೇಶಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಭೇಟಿ ನೀಡಿ ಅಲ್ಲಿನ ಜನರ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜನತೆಯ ದೈನಂದಿನ ಚಟುವಟಿಕೆ ನಡೆಸಲು ತೆಗೆದುಕೊಂಡ ನಿರ್ಣಯಗಳ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಸಮಾಲೋಚಿಸಿದರು. ಸೀಲ್ ಡೌನ್ ನಿಂದ ಸ್ಥಳೀಯರ ದೈನಂದಿನ ಚಟುವಟಿಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತದ ಜೊತೆಗೆ ಸದಾ ಸಂಪರ್ಕದಲ್ಲಿದ್ದು ಜನರಿಗೆ ಸದಾ ಸಹಕಾರವನ್ನು ನೀಡಲು ಬದ್ಧನಿದ್ದೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸಹಿತ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.