ಅಜೀಮ್ ಪ್ರೇಮ್‍ಜಿ, ಸ್ಕೋಡ್‍ವೆಸ್ ಸೇವಾ ಸಂಸ್ಥೆಯಿಂದ ಕಿಟ್ ವಿತರಣೆ
ಭಟ್ಕಳ: ಶಿರಸಿಯ ಸ್ಕೋಡ್‍ವೆಸ್ ಸೇವಾ ಸಂಸ್ಥೆ, ವಿಪ್ರೋದ ಅಜೀಮ್ ಪ್ರೇಮ್‍ಜಿ ಫಿಲಾಂತರೋಪಿಕ್ ಇನಿಶಿಯೇಟಿವ್ಸ್ ಪ್ರಾಯೋಜಿಸಿದ ಸುಮಾರು 10 ಲಕ್ಷ ರೂ. ಮೌಲ್ಯದ ಆಹಾರ ದಾನ್ಯಗಳ ಕಿಟ್‍ನ್ನು ಕ್ಷೇತ್ರದ 737 ಎಂಡೋಸೆಲ್ಪಾನ್ ಪಿಡಿತರಿಗೆ ನೀಡಲು ಮುಂದಾಗಿದ್ದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ನಿತ್ಯೋಪಯೋಗಿ ವಸ್ತುಗಳ ಕಿಟ್‍ನ್ನು ಶಾಸಕ ಸುನಿಲ್ ನಾಯ್ಕ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನ ಲಾಕ್‍ಡೌನ್ ಆದಾಗಿನಿಂದ ಜನತೆಯ ಸಂಕಷ್ಟಕ್ಕೆ ಸ್ಪಂಧಿಸುತ್ತಿದ್ದು ಈಗಾಗಲೇ ಕ್ಷೇತ್ರದಲ್ಲಿ 15 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಪೂರೈಸಿದ್ದೇನೆ. ಇನ್ನೂ ಕೂಡಾ ಲಾಕ್‍ಡೌನ್ ಮುಗಿ ಯುವ ತನಕ ಈ ಕಾರ್ಯ ಮುಂದುವರಿಯಲಿದೆ ಎಂದರು.
ಸ್ಕೋಡ್‍ವೇಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಸ್. ರವಿಚಂದ್ರ, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸುಶೀಲಾ ಅವರು ಉಪಸ್ಥಿತರಿದ್ದರು. ಶಾಸಕರ ಆಪ್ತಕಾರ್ಯದರ್ಶಿ ಕರಿಯಪ್ಪ ನಾಯ್ಕ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.