ಅಂತರ್‌ಜಿಲ್ಲಾ ಪ್ರಯಾಣಕ್ಕೆ ಎಸ್ಪಿ ಅನುಮತಿ ಅಗತ್ಯ: ಪುತ್ತೂರು ಎಸಿ
Update: 2020-04-30 11:15 IST
ಪುತ್ತೂರು, ಎ.30: ಅಂತರ್‌ಜಿಲ್ಲಾ ಪ್ರಯಾಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದಲೇ ಪಾಸ್ ಪಡೆದುಕೊಂಡು ಪ್ರಯಾಣಿಸುವಂತೆ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಜಿಲ್ಲೆಯ ಒಳಗಡೆಯ ಪ್ರಯಾಣಕ್ಕೆ ಸಹಾಯಕ ಆಯುಕ್ತರ ಕಚೇರಿಯ ಮೂಲಕ ಪಾಸ್ ನೀಡಲಾಗುವುದು. ಅಂತರ್‌ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರೂ ಪಾಸ್ ಕೇಳಿಕೊಂಡು ಸಹಾಯಕ ಆಯುಕ್ತರ ಕಚೇರಿಗೆ ಬರುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಅಂತರ್‌ಜಿಲ್ಲೆಗೆ ಪ್ರಯಾಣಿಸುವವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದಲೇ ಪಾಸ್ ಪಡೆದುಕೊಂಡು ಪ್ರಯಾಣಿಸಬೇಕು. ಈ ಬಗ್ಗೆ ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಬೇಡ ಎಂದು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಸ್ಪಷ್ಟಪಡಿಸಿದ್ದಾರೆ.