ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ರಮಝಾನ್ ಕಿಟ್ ವಿತರಣೆ
Update: 2020-04-30 11:18 IST
ಪುತ್ತೂರು, ಎ.30: ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ದಾನಿಗಳ ಸಹಕಾರದೊಂದಿಗೆ ಕೆಮ್ಮಾರ, ಕೊಯ್ಲ ಮತ್ತು ಗಂಡಿಬಾಗಿಲು ವ್ಯಾಪ್ತಿಯ ಸುಮಾರು 33 ಮನೆಗಳಿಗೆ ರಮಝಾನ್ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಝೀಝ್ ಬಿ.ಕೆ., ಪದಾಧಿಕಾರಿಗಳಾದ ಮುಸ್ತಫ ಬೆಂಗಳೂರು, ಬಾಶಿತ್ ಕೆಮ್ಮಾರ, ಖಲಂದರ್ ಎನ್.ಪಿ., ಅಶ್ರಫ್ ಆಕಿರೆ, ಹನೀಫ್ ಅಳಕೆ, ಅಥಾವುಲ್ಲಾ, ಹಕೀಂ ಆಕಿರೆ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಜಮಾಲ್ ಎನ್.ಎ., ಶೌಕತ್ ಅಲಿ, ಇಸಾಕ್ ಕೆ., ವೈ.ಜವಾದ್, ಮುಬಾರಕ್ ಮತ್ತಿತರರು ಉಪಸ್ಥಿತರಿದ್ದರು