×
Ad

ಗ್ರೀನ್ ಝೋನ್ ಎಫೆಕ್ಟ್: ಉಡುಪಿಯಲ್ಲಿ ಟ್ರಾಫಿಕ್ ಜಾಮ್!

Update: 2020-04-30 12:07 IST

ಉಡುಪಿ ಎ.30: ಜಿಲ್ಲಾಡಳಿತದ ಅವಿರತ ಪ್ರಯತ್ನದ ಫಲವಾಗಿ ಹಸಿರು ವಲಯಕ್ಕೆ ದಾಖಲಾದರೂ ಅದರ ಪರಿಣಾಮವಾಗಿ ಈಗ  ಉಡುಪಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಉಡುಪಿ ನಗರದಾದ್ಯಂತ ಬೆಳಗ್ಗಿನಿಂದಲೇ ವಾಹನದಟ್ಟಣೆ ಉಂಟಾಗಿದ್ದು ಕೆ.ಎಂ. ಮಾರ್ಗದಲ್ಲಿ ಅಕ್ಷರಶಃ ಟ್ರಾಫಿಕ್ ಜಾಮ್ ಕಂಡುಬಂತು. ಗಮನಾರ್ಹ ಸಂಗತಿ ಅಂದರೆ ನಿನ್ನೆಯಿಂದ ಉಡುಪಿ ಗ್ರೀನ್ ಝೋನ್ ನಲ್ಲಿದೆ. ಹೀಗಾಗಿ ಹಲವು ಸೇವೆಗಳು, ಅಂಗಡಿಮುಂಗಟ್ಟುಗಳಿಗೆ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿದೆ. ಹನ್ನೊಂದು ಗಂಟೆತನಕ ಅಂಗಡಿ ತೆರೆಯಲು ಅವಕಾಶ ಇದ್ದು, ಇವತ್ತು ಬಹುತೇಕ ಅಂಗಡಿಗಳು ತೆರೆದಿದ್ದವು.ಈ ಹಿನ್ನೆಲೆಯಲ್ಲಿ ಬೆಳಿಗ್ಗಿನಿಂದಲೇ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಲಾಕ್ ಡೌನ್ ಮುಂಚಿನ ದಿನಗಳನ್ನು ನೆನಪಿಸುವಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News