ಅಮೆರಿಕದಲ್ಲಿ ಭಾರತದ ದಂಪತಿಯ ಸಾವು

Update: 2020-04-30 07:42 GMT
ಗರಿಮಾ ಕೊಥಾರಿ

ನ್ಯೂಯಾರ್ಕ್,ಎ.30:ಐದು ತಿಂಗಳ ಗರ್ಭಿಣಿಯಾಗಿದ್ದ 35ರ ವಯಸ್ಸಿನ ಮಹಿಳೆ ತಾನು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ,ಈಕೆಯ ಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಜರ್ಸಿ ಸಿಟಿಯ ಹಡ್ಸನ್ ರಿವರ್‌ನಲ್ಲಿ ನಡೆದಿದೆ.

ಎಪ್ರಿಲ್ 26ರಂದು ಗರಿಮಾ ಕೊಥಾರಿ ಎಂಬ ಮಹಿಳೆಯ ಮೃತದೇಹವನ್ನು ಜರ್ಸಿ ಸಿಟಿ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಎಂದು ಹಡ್ಸನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಪ್ರಾದೇಶಿಕ ವೈದ್ಯಕೀಯ ಪರೀಕ್ಷಕರು ಶವ ಪರೀಕ್ಷೆ ನಡೆಸಿದ ಬಳಿಕ ಕೊಥಾರಿ ಸಾವು ಒಂದು ನರಹತ್ಯೆ ಎಂದು ತೀರ್ಮಾನಿಸಲಾಯಿತು. ಮಹಿಳೆಯ ದೇಹದಲ್ಲಿ ಹಲವು ಗಾಯದ ಗುರುತುಗಳಿದ್ದವು. ಕೊಥಾರಿ ಐದು ತಿಂಗಳ ಗರ್ಭಿಣಿಯಾಗಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಕೊಥಾರಿಯ ಪತಿ 37 ವಯಸ್ಸಿನ ಮೋಹನ್ ಮಾಲ್ ಆತ್ಮಹತ್ಯೆ ಮಾಡಿಕೊಂಡಿದಾರೆ. ಜರ್ಸಿ ಸಿಟಿ ಪೊಲೀಸ್ ಇಲಾಖೆ ಆತ್ಮಹತ್ಯೆ ಯತ್ನ ವರದಿ ದಾಖಲಿಸಿಕೊಂಡಿದೆ. ಘಟನಾಸ್ಥಳದಲ್ಲಿ ಮೋಹನ್ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದು, ಪ್ರಾದೇಶಿಕ ವೈದ್ಯಕೀಯ ಪರೀಕ್ಷಕರು ಇನ್ನೂ ಮೋಹನ್ ಸಾವಿನ ವರದಿ ನೀಡಿಲ್ಲ. ಪ್ರಾಸಿಕ್ಯೂಟರ್ ಕಚೇರಿಯ ನರಹತ್ಯೆ ಘಟಕವು ಜರ್ಸಿ ಸಿಟಿ ಪೊಲೀಸ್ ಇಲಾಖೆಯ ನೆರವಿನಿಂದ ಪ್ರಕರಣದ ತನಿಖೆ ನಡೆಸುತ್ತಿದೆ.

 ಪತ್ನಿ- ಪತಿ ಸಾವು ಕೊಲೆ ಹಾಗೂ ಆತ್ಮಹತ್ಯೆಯ ಪರಿಣಾಮ ಎಂದು ಕಂಡುಬಂದಿದ್ದರೂ ಪ್ರಾದೇಶಿಕ ವೈದ್ಯಕೀಯ ಪರೀಕ್ಷಕರು ಸಂಪೂರ್ಣ ಪರಿಶೀಲನೆ ನಡೆಸಿ ಅಂತಿಮ ನಿರ್ಣಯಕ್ಕೆ ಇನ್ನಷ್ಟೇ ಬರಬೇಕಾಗಿದೆ.

 ಕೊಥಾರಿ ಪ್ರತಿಭಾವಂತ ಚೆಫ್ ಆಗಿದ್ದು, ಮೋಹನ್ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ಹಳೆ ವಿದ್ಯಾರ್ಥಿಯಾಗಿದ್ದು, ಕೊಲಂಬಿಯ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ಬಂದಿದ್ದರು.ದಂಪತಿಯು ನುಕ್ಕಾಡ್ ಹೆಸರಿನ ಭಾರತೀಯ ರೆಸ್ಟೋರೆಂಟ್‌ನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News