ಉಡುಪಿ: 16 ಮಂದಿಯ ಗಂಟಲು ದ್ರವ ಮಾದರಿ ನೆಗೆಟಿವ್
ಉಡುಪಿ, ಎ.30: ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಬಾಕಿ ಉಳಿದಿದ್ದ ಒಟ್ಟು 63 ಸ್ಯಾಂಪಲ್ ಗಳಲ್ಲಿ ಇಂದು 16ರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಫಲಿತಾಂಶವನ್ನು ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇದರಿಂದ ನಿನ್ನೆಯವರೆಗೆ ಕಳುಹಿಸಿದ್ದರಲ್ಲಿ ಬಾಕಿ ಇರುವ 47 ಮಾದರಿ ಗಳೊಂದಿಗೆ ಇಂದು ಕಳುಹಿಸಲಾದ 29 ಮಾದರಿಗಳು ಸೇರಿ ಒಟ್ಟು 76 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ. ಇವುಗಳಲ್ಲಿ ನಾಗಮಂಗಲದಲ್ಲಿ ಪಾಸಿಟಿವ್ ಆದ ವ್ಯಕ್ತಿಯೊಂದಿಗೆ ಉಡುಪಿಯಲ್ಲಿ ಸಂಪರ್ಕಕ್ಕೆ ಬಂದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಹಾಗೂ ಸಾಸ್ತಾನ ಟೋಲ್‌ಗೇಟ್‌ನ 18 ಮಂದಿ ಸಿಬ್ಬಂದಿಗಳ ಗಂಟಲು ದ್ರವದ ಮಾದರಿಯೂ ಸೇರಿವೆ ಎಂದು ಅವರು ಹೇಳಿದರು.
ಇದರಿಂದ ನಿನ್ನೆಯವರೆಗೆ ಕಳುಹಿಸಿದ್ದರಲ್ಲಿ ಬಾಕಿ ಇರುವ 47 ಮಾದರಿ ಗಳೊಂದಿಗೆ ಇಂದು ಕಳುಹಿಸಲಾದ 29 ಮಾದರಿಗಳು ಸೇರಿ ಒಟ್ಟು 76 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ. ಇವುಗಳಲ್ಲಿ ನಾಗಮಂಗಲದಲ್ಲಿ ಪಾಸಿಟಿವ್ ಆದ ವ್ಯಕ್ತಿಯೊಂದಿಗೆ ಉಡುಪಿಯಲ್ಲಿ ಸಂಪರ್ಕಕ್ಕೆ ಬಂದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಹಾಗೂ ಸಾಸ್ತಾನ ಟೋಲ್‌ಗೇಟ್‌ನ 18 ಮಂದಿ ಸಿಬ್ಬಂದಿಗಳ ಗಂಟಲು ದ್ರವದ ಮಾದರಿಯೂ ಸೇರಿವೆ ಎಂದು ಅವರು ಹೇಳಿದರು.
ಕೊರೋನ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ಇನ್ನೂ 29 ಮಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಗುರುವಾರ ಪರೀಕ್ಷೆ ಗಾಗಿ ಕಳುಹಿಸಲಾಗಿದೆ. ಇದರಲ್ಲಿ ಎರಡು ಕೋವಿಡ್ ಶಂಕಿತರದ್ದಾದರೆ, ಇನ್ನೆರಡು ಸ್ಯಾಂಪಲ್ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರದ್ದಾಗಿದೆ. ಉಳಿದಂತೆ ಆರು ಮಾದರಿಗಳು ತೀವ್ರ ಉಸಿರಾಟದ ತೊಂದರೆಯವರು, 16 ಶೀತಜ್ವರದಿಂದ ಬಳಲುತ್ತಿರುವವರ ಹಾಗೂ ಮೂರು ಕೊರೋನ ಹಾಟ್‌ಸ್ಪಾಟ್ ನಿಂದ ಬಂದವರ ಸ್ಯಾಂಪಲ್‌ಗಳನ್ನು ಸಹ ಕೊರೋನ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಒಟ್ಟು 15 ಮಂದಿ ಕೋವಿಡ್-19ರ ವಿವಿಧ ಗುಣಲಕ್ಷಣದೊಂದಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಸೇರ್ಪಡೆಗೊಂಡವರಲ್ಲಿ ಆರು ಪುರುಷರು ಹಾಗೂ ಒಂಭತ್ತು ಮಂದಿ ಮೂವರು ಮಹಿಳೆಯರಿದ್ದಾರೆ. ಇವರಲ್ಲಿ ಒಂಭತ್ತು ಮಂದಿಯಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರೆ, ತಲಾ ಮೂವರು ಕೊರೋನ ಶಂಕಿತರು ಹಾಗೂ ಮೂವರು ಶೀತಜ್ವರದ ಬಾಧೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ 10 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆ ಗೊಂಡಿದ್ದು, 51 ಮಂದಿ ಇನ್ನೂ ಅದೇ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟಾರೆಯಾಗಿ 340 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಗುರುವಾರ 16 ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿ ಬಂದಿದ್ದು, ಈ ಮೂಲಕ ಜಿಲ್ಲೆಯಿಂದ ಇದುವರೆಗೆ ಪಡೆದ ಒಟ್ಟು 1145 ಮಂದಿಯ ಸ್ಯಾಂಪಲ್‌ಗಳಲ್ಲಿ 1069ರ ವರದಿ ಬಂದಿದ್ದು, 1066 ನೆಗೆಟಿವ್ ಹಾಗೂ ಮೂರು ಪಾಸಿಟಿವ್ ಆಗಿ ಬಂದಿವೆ. ಪಾಸಿಟಿವ್ ಆದವರೆಲ್ಲರೂ ಚಿಕಿತ್ಸೆಯಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19ರ ವಿವಿಧ ಕಾರಣಗಳಿಗಾಗಿ ಇಂದು 72 ಮಂದಿ ಯನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ.ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3536 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2212 (ಇಂದು 66) ಮಂದಿ 28 ದಿನಗಳ ನಿಗಾವನ್ನೂ, 2961 (70) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 483 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 41 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.
ಮೃತದೇಹ ಬಿಡುಗಡೆ: ನಾಲ್ಕುದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ ಹಾಗೂ ಹೃದಯ ಸಮಸ್ಯೆಯಿಂದ ಮೃತಪಟ್ಟ ಗಂಗೊಳ್ಳಿ ಮೂಲದ 82 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಮೃತದೇಹವನ್ನು ಕೊರೋನ ಸೋಂಕಿನ ಪರೀಕ್ಷೆಗೊಳ ಪಡಿಸಿದ್ದು, ಅದರ ಫಲಿತಾಂಶ ಇಂದು ನೆಗೆಟಿವ್ ಆಗಿ ಬಂದಿದೆ. ಹೀಗಾಗಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿ ಇಡಲಾಗಿದ್ದ ಮೃತದೇಹವನ್ನು ಪೋಸ್ಟ್‌ಮಾರ್ಟಂ ಬಳಿಕ ಇಂದು ಸಂಬಂಧಿಕರಿಗೆ ಅಂತ್ಯಸಂಸ್ಕಾರಕ್ಕೆ ಬಿಟ್ಟುೊಡಲಾಗಿದೆ ಎಂದು ಡಿಎಚ್‌ಓ ತಿಳಿಸಿದರು.