×
Ad

ಕಾಸರಗೋಡು: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತ್ಯು

Update: 2020-04-30 22:05 IST
ಸಾಂದರ್ಭಿಕ ಚಿತ್ರ

ಕಾಸರಗೋಡು: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಞಿಂಗಾಡ್ ನಲ್ಲಿ ಗುರುವಾರ ಸಂಜೆ ನಡೆದಿದೆ.

ಕಾಞಿಂಗಾಡ್ ಬಾವ ನಗರದ ನೂರುದ್ದೀನ್ ಎಂಬವರ ಪುತ್ರ ಬಶೀರ್ (4), ನಾಸಿರ್ ಎಂಬವರ ಪುತ್ರ ಅಜ್ನಾಸ್ (5), ಸಮೀರ್ ಎಂಬವರ ಪುತ್ರ ನಿಶಾದ್ (6) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.

ಮನೆ ಸಮೀಪದ ನೀರು ತುಂಬಿದ್ದ ಹೊಂಡಕ್ಕೆ ಸಂಜೆ ವೇಳೆ ಇಳಿದಿದ್ದ ಅವರು ಅದರಲ್ಲಿದ್ದ  ಕೆಸರಲ್ಲಿ ಹೂತುಹೋಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪರಿಸರವಾಸಿಗಳು ಹಾಗೂ ಮನೆಯವರು ಮಕ್ಕಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮಕ್ಕಳು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News