×
Ad

ಬಿಜೆಪಿಯಿಂದ ಕಿಟ್ ರಾಜಕೀಯ: ಐವನ್ ಆರೋಪ

Update: 2020-04-30 22:10 IST

ಮಂಗಳೂರು, ಎ.30: ಸರಕಾರದಿಂದ ನೀಡುವ ಸವಲತ್ತುಗಳನ್ನು ಪಕ್ಷದ ಆಧಾರದಲ್ಲಿ ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ. ಅಲ್ಲದೆ ರಾಜ್ಯದ ಮುಖ್ಯಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.

ದ.ಕ. ಜಿಲ್ಲೆಯಲ್ಲಿ ದೇವಸ್ಥಾನಗಳಿಂದ, ದಾನಿಗಳಿಂದ ಮತ್ತು ಸರಕಾರಿ ಇಲಾಖೆಗಳಿಂದ ಪಡೆದ ಅನುದಾನದಿಂದ ಬಿಜೆಪಿ ಪಕ್ಷದ ಶಾಸಕರು ತಮ್ಮ ಸ್ವಂತ ಹಣದಿಂದ ನೀಡಲಾಗುತ್ತಿದೆ ಎಂದು ಬಿಂಬಿಸಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಐವನ್ ದೂರಿದ್ದಾರೆ.

ಪ್ರತಿಯೊಂದು ಕಾಲನಿಯಿಂದಲೂ ಈ ಬಗ್ಗೆ ದೂರುಗಳು ಬರುತ್ತದೆ. ಹಾಗಾಗಿ ತಕ್ಷಣ ತನಿಖೆ ನಡೆಸಿ ಸರಕಾರದ ಸವಲತ್ತುಗಳನ್ನು ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗವು ಜನಪ್ರತಿನಿಧಿಗೊಂದಿಗೆ ವಿತರಿಸಲು ವ್ಯವಸ್ಥೆ ಮಾಡಬೇಕು. ಫಲಾನುಭವಿಗಳನ್ನು ಪಕ್ಷದ ವತಿಯಿಂದ ಗುರುತಿಸಿ ನೀಡಲಾಗುವುದನ್ನು ನಿಲ್ಲಿಸಬೇಕೆಂದು ಐವನ್ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ವೈರಸ್ ನಿಯಂತ್ರಣ ಮಾಡುವುದನ್ನು ಬಿಟ್ಟು ಬೇರೆ ಇತರ ಕೆಲಸ ಕಾರ್ಯಗಳಿಗೆ ಸಮಯವನ್ನು ವಿನಿಯೋಗ ಮಾಡಲಾ ಗುತ್ತಿದೆ. ಮಾರುಕಟ್ಟೆ ವಿಸ್ತರಣೆ, ಟೆಂಡರ್ ಕರೆಯದೆ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ತರಾತುರಿ, ಪಾಸ್‌ಗಳ ಹಂಚಿಕೆಯಲ್ಲಿ ಅವ್ಯವಹಾರ, ಕಿಟ್ ‌ಗಳನ್ನು ಸ್ವಂತಕ್ಕಾಗಿ ಉಪಯೋಗ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಕೊರೋನ ರೋಗ ಪತ್ತೆಗೆ ಬೇಕಾದ ಲ್ಯಾಬೋರೇಟರಿ, ಮೆಡಿಕಲ್ ಕಾಲೇಜುಗಳು ನಿರ್ಮಾಣ ಮಾಡಲು ಸಿದ್ದರಿದ್ದರೂ ಕೂಡ ಅವರಿಗೆ ಪರ ವಾನಿಗೆ ಕೊಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದು ಐವನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News