ರಶ್ಯದ ಪ್ರಧಾನಮಂತ್ರಿ ಮಿಖಾಯಿಲ್‌ಗೆ ಕೊರೋನ ವೈರಸ್ ಸೋಂಕು

Update: 2020-05-01 05:57 GMT

ಹೊಸದಿಲ್ಲಿ, ಮೇ 1: ರಶ್ಯದ ಪ್ರಧಾನಮಂತ್ರಿ ಮಿಖಾಯಿಲ್ ಮಿಶುಸ್ಟಿನ್ ಕೊರೋನ ವೈರಸ್ ಸೋಂಕು ತಗಲಿರುವುದಾಗಿ ವರದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಟ್ವೀಟ್ ಮುಖಾಂತರ ಮಿಶುಸ್ಟಿನ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗನ ದೂರದರ್ಶನದ ಸಭೆಯಲ್ಲಿ ಮಿಶುಸ್ಟಿನ್ ಅವರು ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಲು ಸ್ವಯಂ ಪ್ರತ್ಯೇಕತೆಯನ್ನು ಗಮನಿಸಬೇಕು ಎಂದು ಹೇಳಿದ್ದಾರೆ. ರಶ್ಯಕ್ಕೆ ಹಂಗಾಮಿ ಪ್ರಧಾನಿಯ ನೇಮಿಸಲು ಸಲಹೆ ನೀಡಿದ್ದಾರೆ.

"ಶೀಘ್ರ ಚೇತರಿಕೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ರಶ್ಯದ ಪ್ರಧಾನಮಂತ್ರಿ ಮಿಶುಸ್ಟಿನ್ ಅವರಿಗೆ ನನ್ನ ಶುಭ ಹಾರೈಕೆ. ಕೋವಿಡ್-19 ಪಿಡುಗಿನ ವಿರುದ್ಧ ಹೋರಾಟದ ಪ್ರಯತ್ನಕ್ಕೆ ನಮ್ಮ ಆತ್ಮೀಯ ಸ್ನೇಹಿತ ರಶ್ಯದೊಂದಿಗೆ ನಾವು ನಿಲ್ಲುತ್ತೇವೆ'' ಎಂದು ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ಸೋಂಕು ಯಾರಿಗೂ ಕೂಡ ಹರಡಬಹುದು. ನಿಮ್ಮ ಸಲಹೆ ಪಡೆಯದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನೀವು ಕೆಲಸ ಮಾಡಲು ಸಮರ್ಥರಿದ್ದೀರಿ ಎನ್ನುವುದು ನನ್ನ ಭಾವನೆ ಎಂದು ರಶ್ಯದ ಅಧ್ಯಕ್ಷ ಪುಟಿನ್ ಅವರು ಮಿಶುಸ್ಟಿನ್ ಅವರೊಂದಿಗಿನ ಮಾತುಕತೆ ವೇಳೆ ತಿಳಿಸಿದರು ಎಂದು ಎಎಫ್‌ಪಿ ವರದಿ ಮಾಡಿದೆ.

ಮಿಶುಟಿನ್ ಕೋವಿಡ್-19 ವೈರಸ್ ಸೋಂಕಿಗೆ ಒಳಗಾದ ರಶ್ಯದ ಪ್ರಮುಖ ಅಧಿಕಾರಿಯಾಗಿದ್ದಾರೆ. ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್‌ಗೆ ಕೆಲವು ವಾರಗಳ ಹಿಂದೆ ಕೋವಿಡ್-19 ಸೋಂಕು ತಗಲಿತ್ತು. ಇದೀಗ ಅವರು ಸೋಂಕಿನಿಂದ ಗುಣಮುಖರಾಗಿ ಕರ್ತ್ಯವಕ್ಕೆ ಹಾಜರಾಗಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News