×
Ad

ಮೂಡುಬಿದಿರೆ: ಜಾರ್ಖಂಡ್ ಮೂಲದ ಯುವಕನಿಗೆ ಕ್ವಾರಂಟೈನ್

Update: 2020-05-01 12:59 IST

ಮೂಡುಬಿದಿರೆ, ಮೇ 1: ಮನೆ ಕೆಲಸದಿಂದ ವಜಾಗೊಂಡು ತಿನ್ನಲು ಆಹಾರ ಸಿಗದೆ ಕಲ್ಲಮುಂಡ್ಕೂರಿನಲ್ಲಿ ಸುತ್ತಾಡುತ್ತಿದ್ದ ಜಾರ್ಖಂಡ್ ಮೂಲದ ಯುವಕನನ್ನು ಕಂದಾಯ ಅಧಿಕಾರಿಗಳು ಪತ್ತೆ ಹಚ್ಚಿ ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಕಲ್ಲಮುಂಡ್ಕೂರಿನಲ್ಲಿ ಗ್ರಾಪಂ ಸದಸ್ಯರೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ 25ರ ಹರೆಯದ ಯುವಕ ಕೆಲಸ ಕಳಕೊಂಡು ಬೀದಿಪಾಲಾಗಿದ್ದ. ಅಂದರೆ ಕೆಲಸ ಕಳೆದುಕೊಂಡ ಬಳಿಕ ಒಬ್ಬರ ಮನೆಯಲ್ಲಿ ಆಶ್ರಯ ಪಡಕೊಂಡಿದ್ದ. ಅಲ್ಲಿಂದ ಹೊರ ಬಂದು ಕಲ್ಲಮುಂಡ್ಕೂರು, ಬಜ್ಪೆ ಪರಿಸರದಲ್ಲಿ ಸುತ್ತಾಡುತ್ತಿದ್ದ ಎನ್ನಲಾಗಿದೆ.

ಹಸಿವಿನಿಂದ ಬಳಲುತ್ತಿದ್ದ ಈತನ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ತಹಶಿಲ್ದಾರ್ ಅನಿತಾ ಲಕ್ಷ್ಮಿಯ ಸೂಚನೆಯಂತೆ ಕಲ್ಲಮುಂಡ್ಕೂರು ಪಿಡಿಒ ಉಗ್ಗಪ್ಪಮೂಲ್ಯರು ಯುವಕನನ್ನು ಪತ್ತೆ ಹಚ್ಚಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಊಟದ ವ್ಯವಸ್ಥೆ ಕಲ್ಪಿಸಿ ವೈದ್ಯಕೀಯ ತಪಾಸಣೆಗೊಪಡಿಸಿದ್ದಾರೆ.

ಯುವಕನಲ್ಲಿ ಯಾವುದೇ ಕೊರೋನ ರೋಗದ ಲಕ್ಷಣಗಳು ಕಂಡು ಬಾರದಿದ್ದರೂ ಕೂಡ ಕೆಲವು ದಿನ ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News