×
Ad

​ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ವಂಚಿಸಲು ಯತ್ನ

Update: 2020-05-01 13:00 IST

ಮೂಡುಬಿದಿರೆ, ಮೇ 1: ಇಲ್ಲಿನ ವಿಜಯ ಬ್ಯಾಂಕ್‌ನ ಗ್ರಾಹಕರೊಬ್ಬರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ವಂಚಿಸಲು ವಿಫಲ ಯತ್ನ ನಡೆಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ವಿಜಯಾ ಬ್ಯಾಂಕ್ ಹೆಲ್ಪ್‌ಲೇನ್ ಬೆಂಗಳೂರು ಎಂದು ಪರಿಚಯಿಸಿಕೊಂಡ ವ್ಯಕ್ತಿಯು ಕಲ್ಲಬೆಟ್ಟಿನ ಗ್ರಾಹಕರೊಬ್ಬರಿಗೆ ಕರೆ ಮಾಡಿ ‘ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳದಿದ್ದಲ್ಲಿ ಖಾತೆಯನ್ನು ಬಂದ್ ಮಾಡಲಾಗುವುದು, ಆಧಾರ್ ಲಿಂಕ್ ಮಾಡಲು ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳಿಸಲಾಗಿದೆ. ಅದನ್ನು ತಿಳಿಸಿ ಎಂದರು. ಕರೆಯ ಬಗ್ಗೆ ಅನುಮಾನಗೊಂಡ ಗ್ರಾಹಕ ಒಟಿಪಿ ಬದಲು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಕೊಟ್ಟರು ಎನ್ನಲಾಗಿದೆ. ಅದು ಸರಿ ಇಲ್ಲ ಎಂದು ವಂಚಕ ಎರಡನೇ ಬಾರಿ ಕಳಿಸಿದ ಒಟಿಪಿ ನಂಬರನ್ನು ಕೂಡ ಗ್ರಾಹಕ ತಪ್ಪಾಗಿ ಹೇಳಿದ್ದಲ್ಲದೆ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯನ್ನು ವಿಚಾರಿಸಿದಾಗ ಆ ಕಡೆಯಿಂದ ಕರೆಯನ್ನು ಕಡಿತಗೊಳಿಸಲಾಯಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News