×
Ad

ಲಾಕ್ ಡೌನ್: ಟ್ಯಾಬ್ ಖರೀದಿಸಲು ಕೂಡಿಟ್ಟ ಹಣವನ್ನು ದಾನವಾಗಿ ನೀಡಿದ ಪುಟಾಣಿ

Update: 2020-05-01 13:29 IST

ಉಡುಪಿ : ಇಡೀ ದೇಶವೇ ಲಾಕ್'ಡೌನ್ ನಿಂದ ಸಂಕಷ್ಟದಲ್ಲಿರುವಾಗ ಪುಟ್ಟ ಹೃದಯವೊಂದು ಬಡವರ ನೋವಿಗೆ ಸ್ಪಂದಿಸಿದೆ. ಸೈಂಟ್ ಸಿಸಿಲಿಯ 4 ನೇ ತರಗತಿಯ ವಿದ್ಯಾರ್ಥಿನಿ ಅನಮ್ ಅನೀಸ್ ಟ್ಯಾಬ್ ಖರೀದಿಸಲು ಇಟ್ಟ ಹಣವನ್ನು ದಾನವಾಗಿ ನೀಡಿದ್ದಾರೆ.

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಲಾಕ್'ಡೌನ್ ಆರಂಭವಾದ ದಿನದಿಂದ ರಿಲೀಫ್ ಕೆಲಸದಲ್ಲಿ ತೊಡಗಿಕೊಂಡಿದ್ದು, ಅಲ್ಲಿನ ಸಂಚಾಲಕರಿಗೆ 760 ರೂ. ನೀಡಿ ಬಡವರ ಹಸಿವು ನೀಗಿಸಲು ನನ್ನ ಸಣ್ಣ ಕೊಡುಗೆ ಎಂದು ಅನಮ್ ಹೇಳಿದ್ದಾರೆ.

ಪುಟಾಣಿ ಹೃದಯದ ಈ ಮಾನವೀಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News