×
Ad

ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಕಿಟ್ ವಿತರಣೆ

Update: 2020-05-01 13:39 IST

ಮಂಗಳೂರು, ಮೇ 1 : ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಕೊರೋನ ವೈರಸ್‌ನಿಂದ ಲಾಕ್‌ಡೌನ್ ಆಗಿ ತೊಂದರೆಗೊಳಗಾದ ಮಂಗಳೂರು ತಾಲೂಕು ವ್ಯಾಪ್ತಿಯ ಬಂಟರ ಸಮಾಜದ ಸಂತ್ರಸ್ತ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಕಚೇರಿಯಲ್ಲಿ ಬಂಟರ ಯಾನೆ ನಾಡವ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರ ಮಾರ್ಗದರ್ಶನದಂತೆ ಮಂಗಳೂರು ತಾಲೂಕಿನ ಕಾರ್ಯಕಾರಿ ಸಮಿತಿಯ ಸದಸ್ಯರ ಮೂಲಕ ಅಹಾರ ಕಿಟ್ ‌ಗಳನ್ನು ಆಯಾಯ ವಲಯಗಳಿಗೆ ನೀಡಲಾಯಿತು.ಕೊರೋನ ವೈರಸ್‌ನಿಂದ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಜನರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ತಿಳಿಸಿದರು.

ಈ ಸಂದರ್ಭ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ತಾಲೂಕು ಸಹ ಸಂಚಾಲಕ ಮುರಳೀಧರ ಶೆಟ್ಟಿ ಎಡಪದವು, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಮಾಜಿ ಕಾರ್ಯದರ್ಶಿ ವಸಂತ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯರಾಮ ಸಾಂತ, ಉಮೇಶ್ ರೈ ಪದವು ಮೇಗಿನ ಮನೆ, ಜಗನ್ನಾಥ ಶೆಟ್ಟಿ ಬಾಳ, ಕೇಶವ ಮಾರ್ಲ, ಎಂ. ಸುಂದರ ಶೆಟ್ಟಿ, ಸಬಿತಾ ಶೆಟ್ಟಿ, ಡಾ. ಸಚ್ಚಿದಾನಂದ ಶೆಟ್ಟಿ ಮಣೀಶ್ ರೈ, ವಿಕಾಸ್ ಶೆಟ್ಟಿ ಮುಲ್ಕಿ, ಸಿ.ಎ. ಶಾಂತರಾಮ ಶೆಟ್ಟಿ, ಜಯಶೀಲ ಅಡ್ಯಂತಾಯ, ನಿವೇದಿತಾ ಎನ್. ಶೆಟ್ಟಿ. ಹರೀಶ್ ಶೆಟ್ಟಿ ಬಜಪೆ, ಉಮೇಶ್ ಶೆಟ್ಟಿ ಮೂಡುಶೆಡ್ಡೆ, ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ರವೀಂದ್ರ ಶೆಟ್ಟಿ ಶಕ್ತಿನಗರ, ಕಮಲಾಕ್ಷ ಶೆಟ್ಟಿ ಆಕಾಶ ಭವನ ಸೋಹನ್ ಆಳ್ವ ನೀರುಮಾರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News