ಮೇ ದಿನ 12ಗಂಟೆ ಕೆಲಸ ಸಹಿಸದು: ಕೆ.ಶಂಕರ್
ಕುಂದಾಪುರ: ಮೇ ದಿನ ಆರಂಭವಾಗಿರುವುದೇ ಬಂಡವಾಳಗಾರರು ಕಾರ್ಮಿಕರನ್ನು ಪ್ರಾಣಿಗಳಂತೆ ದುಡಿಸಿಕೊಳ್ಳುತ್ತಿರುವುದರ ವಿರುದ್ಧ ನಡೆದ ದೀರ್ಘ ಹೋರಾಟದ ಪ್ರತಿಫಲದಿಂದ ಆದರೆ ಇಂದು ನಮ್ಮನ್ನಾಳುತ್ತಿರುವ ಬಂಡವಾಳಗಾರರ ಪಕ್ಷ ಮತ್ತೆ ಕಾರ್ಮಿಕ ವರ್ಗವನ್ನು ಗುಲಾಮ ರಾಗಿಸುವ 8ಗಂಟೆ ಕೆಲಸದಿಂದ 12ಗಂಟೆಗೆ ಹೆಚ್ಚಳದ ಕಾನೂನು ಮೇ ದಿನದ ಸಂdರ್ಭದಲ್ಲಿ ಜಾರಿ ಮಾಡಿಸುತ್ತಿರುವುದು ಕಾರ್ಮಿಕ ವರ್ಗ ಸಹಿಸಲು ಸಾಧ್ಯವಿಲ್ಲ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಕೆ. ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಕುಂದಾಪುರದಲ್ಲಿ ಇಂದು ನಡೆದ 134ನೇ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ಕೇಂದ್ರ ಸರಕಾರವು ಕಾರ್ಮಿಕ ಸಂಘಟನೆಗಳ ಆಗ್ರಹಗಳಿಗೆ ಬೆಲೆ ನೀಡುತ್ತಿಲ್ಲ.ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಪ್ಯಾಸಿಸ್ಟ್ ದಾರಿಯಲ್ಲಿ ಸಾಗುತ್ತಿದೆ. ಬಂಡವಾಳಗಾರರ ಮನವಿಗಳಿಗೆ ಸ್ಪಂದಿಸುತ್ತ ಶ್ರಮಿಕರ,ಜನಸಾಮಾನ್ಯರ ಸಾವಿರಾರು ಕೋಟಿ ಹಣಗಳನ್ನು ಧಾರೆ ಎರೆಯುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಜನಸಾಮಾನ್ಯರನ್ನು ರಕ್ಷಿಸಲು ಯಾವುದೇ ಹೊಸ ಪ್ಯಾಕೇಜ್ ಗಳನ್ನು ಘೋಷಿಸದೇ ಅನ್ಯಾಯ ಮಾಡಿದೆ ಆದರೆ ಇಂತಹ ಕಷ್ಟದ ಸಂಧರ್ಭದಲ್ಲಿಯೂ ದೇಶದ ಕೆಲವು ಅವರ ಹಿಂಬಾಲಕ ಬಂಡವಾಳಗಾರರಿಗೆ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವುದು ಜನರಿಗೆ ಮಾಡಿದ ಮೋಸವಾಗಿದೆ. ಇಂತಹ ಬಂಡವಾಳ ಶಾಹಿ ವ್ಯವಸ್ಥೆಯನ್ನು ಕಾರ್ಮಿಕ ವರ್ಗ ಸೋಲಿಸಿ ಸಮಾಜವಾದಕ್ಕಾಗಿ ಹೋರಾಟ ತೀವ್ರಗೊಳಿಸಬೇಕು ಎಂದು ಹೇಳಿದರು.
ಸಿಐಟಿಯು ಸಂಚಲನ ಸಮಿತಿ ಸಂಚಾಲಕರಾದ ಎಚ್ ನರಸಿಂಹ ಮಾತನಾಡಿ; ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಮನವಿ ಸ್ವೀಕರಿಸಿ ಉದ್ಯೋಗ,ವೇತನ ರಕ್ಷಿಸುವುದಾಗಿ ಆದೇಶ ನೀಡಿದ ಸರಕಾರವೇ ಅನಂತರ ಮಾಲಿಕರ ಮನವಿ ಸ್ವೀಕರಿಸಿ ಆದೇಶ ಬದಲಿಸಿರುವುದು ಸರಕಾರದ ಇಬ್ಬಗೆ ನೀತಿ ಮತ್ತು ಸಂಪೂರ್ಣ ತಾನು ಬಂಡವಾಳಗಾರರ ಲಾಭಕೋರತನದ ಪಾಲುದಾರ ಎಂಬುವುದನ್ನು ಸಾಬೀತು ಪಡಿಸಿದೆ ಎಂದು ಹೇಳಿ ಪ್ರಾಸ್ತಾವಿಕ ಮಾತನಾಡಿ ಸ್ವಾತಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ; ಪ್ರತಿ ಮೇ ದಿನವೂ ಕಾರ್ಮಿಕ ವರ್ಗದ ಮೇಲೆ ಬಂಡವಾಳ ಶಾಹಿ ನಡೆಸುವ ಹೊಸ ಹೊಸ ರೂಪದ ದಾಳಿಯ ವಿರುದ್ದ ಸ್ಪೂರ್ತಿ ಪಡೆದು ಹೋರಾಟಕ್ಕಿಳಿಯುವ ದಿನವಾಗಿದೆ.134 ವರ್ಷಗಳ ಇತಿಹಾಸದಲ್ಲಿ ಎಲ್ಲಾ ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಮಿಕ ವರ್ಗ ಮೇ ದಿನ ಆಚರಿಸಿದ ಇತಿಹಾಸವಿದೆ.ಈ ಕರೋನ ರೋಗದ ಅವಧಿಯಲ್ಲಿಯೂ ಮೇ ದಿನದ ವೇಳೆಯಲ್ಲಿ ಕೋಟ್ಯಾಂತರ ಕಾರ್ಮಿಕರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.ಅವರೆಲ್ಲರೂ ದೈಹಿಕ ಅಂತರ ಕಾಪಾಡಿಕೊಂಡು ಕೋವಿಡ್ 19 ಹಿಮ್ಮೇಟ್ಟಿಸಬೇಕು ಪೌಷ್ಟಿಕಾಂಶ ಯುಕ್ತ ಆಹಾರಕ್ಕಾಗಿ, ಪೂರ್ಣ ವೇತನಕ್ಕಾಗಿ ಆಗ್ರಹಿಸಿ ರೋಗಕ್ಕೆ ಜಾತಿ ಮತ ಧರ್ಮ ಇಲ್ಲವೆಂದು ಒಗ್ಗಟ್ಟಾಗಿ ರೋಗವನ್ನು ಎದುರಿಸಬೇಕಿದೆ ಮೇ ದಿನದಿಂದ ಸ್ಪೂರ್ತಿ ಪಡೆಯಬೇಕು ಎಂದು ಹೇಳಿ ವಂದಿಸಿದರು.
ಈ ವೇಳೆಯಲ್ಲಿ ವಿ.ನರಸಿಂಹ, ಮಹಾಬಲ ವಡೇರ ಹೋಬಳಿ, ಲಕ್ಷ್ಮಣ ಬರೇಕಟ್ಟು,ರಾಜುದೇವಾಡಿಗ,ಸಂತೋಷಕಲ್ಲಾಗರ,ನಾಗ ಮೆಂಡನ್ ರವಿ.ವಿಎಂ, ಗಣಪ ಇದ್ದರು.
ಜಿಲ್ಲೆಯಾದ್ಯಂತ ಮನೆಮನೆಯಲ್ಲಿ ಮೇ ದಿನ
134ನೇ ಮೇ ದಿನಾಚರಣೆ ಕೋವಿಡ್ 19 ಪರಿಣಾಮವಾಗಿ ಕಾರ್ಮಿಕರು ತಮ್ಮ ತಮ್ಮ ಮನೆಗಳಲ್ಲೆ ಸಮವಸ್ತ್ರ ಧರಿಸಿ ಮೇ ದಿನದ ಭಾವುಟಗಳನ್ನು ಹಾರಿಸಿದರು.
ಗಂಗೊಳ್ಳಿ,ಹೆಮ್ಮಾಡಿ,ಅಸೋಡು ಬಸ್ರೂರು,ಅಂಪಾರು,ಮುದೂರು,ಬೈಂದೂರು,ಉಡುಪಿ,ಕಾರ್ಕಳ ಮುಂತಾದ ಕಡೆಗಳಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಕಟ್ಟಡ ಕಾರ್ಮಿಕರು ತಮ್ಮ ಯೂನಿಯನ್ ಧ್ವಜ ಹಾರಿಸಿದರೆ.ಬಹುತೇಕ ಕಡೆಗಳಲ್ಲಿ ಮನೆಗಳಲ್ಲಿಯೇ ಧ್ವಜ ಹಿಡಿದು ಆಚರಿಸಿರುವುದು ಈ ಮೇ ದಿನದ ಇತಿಹಾಸದಲ್ಲಿ ದಾಖಲಾಗಿದೆ.