×
Ad

ಮಂಗಳೂರು: ಕೊರೋನ ಕುರಿತ ಬಹುಭಾಷಾ ಕವನ ಆಹ್ವಾನ

Update: 2020-05-01 16:57 IST

ಮಂಗಳೂರು, ಮೇ 1: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊರೋನ ಕುರಿತಂತೆ ಬಹುಭಾಷಾ ಕವನಗಳನ್ನು ಆಹ್ವಾನಿಸಿದೆ. ದೇಶದಲ್ಲಿ ‘ಜನತಾ ಕರ್ಫ್ಯೂ’ ನಿಂದ ಆರಂಭಗೊಂಡು ‘ಲಾಕ್‌ಡೌನ್’ ವರೆಗೆ ಅನುಭವಿಸಿದ ಭಾವನಾತ್ಮಕ ಸಂಗತಿಗಳು, ಬದುಕಿದ ರೀತಿ, ಸರಕಾರದ ನಿರ್ವಹಣೆ, ಆರೊಗ್ಯ ಸೇನಾನಿಗಳು ಸ್ಪಂದಿಸಿದ ರೀತಿ ಹೀಗೆ ಹತ್ತು ಹಲವು ಬಗೆಯ ಅನುಭವಗಳಿಗೆ ‘ಕವನ’ದ ರೂಪವನ್ನು ನೀಡಿ ಕಳುಹಿಸಿ ಕೊಡುವಂತೆ ಕೋರಿದೆ.

ಕನ್ನಡ, ತುಳು, ಕೊಂಕಣಿ, ಬ್ಯಾರಿ,ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ ಕವನಗಳನ್ನು ಅಧ್ಯಕ್ಷರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಲ್ಕೂರ ಪ್ರತಿಷ್ಠಾನ, ಶ್ರಿ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ಬೈಲ್, ಮಂಗಳೂರು- 575003, ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ ಕೊಡಬೇಕೆಂದು ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News