×
Ad

ವಿದ್ಯಾರ್ಥಿ ವೇತನ ಬಿಡುಗಡೆಗಾಗಿ ಆಲ್ ಕಾಲೇಜು ಸ್ಟೂಡೆಂಟ್ಸ್ ಅಸೋಸಿಯೇಶನ್ ಮನವಿ

Update: 2020-05-01 18:23 IST

ಮಂಗಳೂರು, ಮೇ 1: ಕೊರೋನ-ಲಾಕ್‌ಡೌನ್‌ನಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ವಿದ್ಯಾರ್ಥಿ ಯುವ ಸಮೂಹಕ್ಕೆ ಶೀಘ್ರ ವಿದ್ಯಾರ್ಥಿ ವೇತನ ಪಾವತಿಸಬೇಕು ಎಂದು ಆಲ್ ಕಾಲೇಜು ಸ್ಟೂಡೆಂಟ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡವು ಸಾಮಾಜಿಕ ಜಾಲತಾಣಗಳ ಮೂಲಕ ದ.ಕ. ಜಿಲ್ಲಾಧಿಕಾರಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಬಹುತೇಕ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವು ಬಿಡುಗಡೆಯಾಗಿದೆ. ಆದರೆ ಶಿಕ್ಷಣ ಸಂಸ್ಥೆಗಳ ಅದನ್ನು ವಿದ್ಯಾರ್ಥಿಗಳ ಖಾತೆಗೆ ವರ್ಗಾಯಿಸಲು ಮೀನಮೇಷ ಎಣಿಸುತ್ತಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ವಿದ್ಯಾರ್ಥಿ ವೇತನ ಪಾವತಿಸಲು ಕ್ರಮ ಜರುಗಿಸಬೇಕು ಎಂದು ಸಂಘದ ಮುಖಂಡರಾದ ಬಾತಿಶ್ ಅಳಕೆಮಜಲು, ಗುರುದತ್ ಮಲ್ಲಿ, ಸಿದ್ದೀಕ್ ಕಾಟಿಪಳ್ಳ, ಅಬ್ದುಲ್ ರಝಾಕ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಈಗಾಗಲೆ ವಿದ್ಯಾರ್ಥಿಗಳು ಎಸೆಸ್ಸೆಲ್ಸಿ, ಪಿಯು, ಪದವಿ ಪರೀಕ್ಷೆಗಳು ನಡೆಯದ ಕಾರಣ ಆತಂಕದಲ್ಲಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಹೊರ ರಾಜ್ಯ, ಜಿಲ್ಲೆಗಳಲ್ಲಿ ಬಾಕಿಯಾಗಿದ್ದಾರೆ. ಹೆಚ್ಚಿನವರಿಗೆ ಹೊರಗಡೆ ಊಟ, ವಸತಿಗೆ ತೊಂದರೆಯಾಗಿದೆ. ಸರಕಾರ ಇದಕ್ಕೂ ಪರಿಹಾರ ಕಲ್ಪಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News