×
Ad

ಯುವಕನಿಗೆ ಚೂರಿ ಇರಿತ ಪ್ರಕರಣ : ಆರೋಪಿ ಸೆರೆ

Update: 2020-05-01 21:59 IST

ಮೂಡುಬಿದಿರೆ : ತಾಕೋಡೆ ಬಳಿ ಇತ್ತೀಚೆಗೆ ಯುವಕನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಬಂಟ್ವಾಳ ಫರಂಗಿಪೇಟೆಯ ಅಮೆಮ್ಮೂರಿನ ಹೈದರ್ (25) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಕೊರೋನ ನಿಯಂತ್ರಣದ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಮೂಡುಬಿದಿರೆಗೆ ಬರುವ ಮತ್ತು ಇಲ್ಲಿಂದ ಹೋಗುವ ವಾಹನಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪುಚ್ಚೆಮೊಗರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಬಂಟ್ವಾಳ ಕಡೆ ಯಿಂದ ಬೈಕ್‍ನಲ್ಲಿ ಬಂದ ಹೈದರ್  ಪುಚ್ಚೆಮೊಗರು ಚೆಕ್ ಪೋಸ್ಟ್‍ನಲ್ಲಿ ಬ್ಯಾರಿಕೇಡ್‍ಗೆ ಬೈಕನ್ನು ಢಿಕ್ಕಿ ಹೊಡೆಸಿ ಮುಂದಕ್ಕೆ ಚಲಾಯಿಸಿದ್ದ ಎನ್ನಲಾಗಿದ್ದು, ಇದನ್ನು ಗಮನಿಸಿದ ಅಲ್ಲಿದ್ದ ಯುವಕರು ಮೂರು ಬೈಕ್‍ಗಳಲ್ಲಿ ಆತನನ್ನು ಬೆನ್ನಟ್ಟಿದರು. ತಾಕೋಡೆ ಕ್ರಾಸ್‍ನಲ್ಲಿ ಯುವಕರು ಆರೋಪಿಯ ಬೈಕ್ ತಡೆದು ವಿಚಾರಿಸಿದಲ್ಲದೆ ಆತನ ಬೈಕ್‍ನ ಕೀ ಕಿತ್ತುಕೊಂಡುದ್ದರು. ಇದರಿಂದ ಕೋಪಗೊಂಡ ಹೈದರ್ ಕರಿಂಜೆಯ ಶಿವಕುಮಾರ್ ಎಂಬಾತನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News