×
Ad

ದೂರವಾಣಿ ಕರೆ ಮಾಡಿ ಬೆದರಿಕೆ ಆರೋಪ : ದೂರು

Update: 2020-05-01 22:29 IST

ಮಂಗಳೂರು, ಮೇ 1: ಕಾವೂರು ಗಾಂಧಿನಗರದ ತಿರುಮಲ ಗ್ಯಾಸ್ ಗೋದಾಮು ಬಳಿ ಹೊಸತಾಗಿ ಮೀನಿನ ವ್ಯಾಪಾರ ಆರಂಭಿಸಿದ ಗಾಂಧಿನಗರ ನಿವಾಸಿ ಸಾಕ್ಷಾತ್ ಶೆಟ್ಟಿ ಅವರಿಗೆ ಎ. 26 ರಂದು ಅಪರಿಚಿತರು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾನು ಮೀನಿನ ವ್ಯಾಪಾರ ಆರಂಭಿಸಿದ್ದನ್ನು ಸಹಿಸದ ಕೆಲವರು ಕರೆ ಮಾಡಿ, ಮೀನಿನ ವ್ಯಾಪಾರ ಮಾಡಲು ಬಿಡುವುದಿಲ್ಲ’ ಎಂಬುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶಾಕ್ಷಾತ್ ಶೆಟ್ಟಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News