×
Ad

ನಾಪತ್ತೆಯಾಗಿದ್ದ ಮೂವರು ನಿರಾಶ್ರಿತರ ಕೇಂದ್ರದಲ್ಲಿ ಪತ್ತೆ

Update: 2020-05-02 20:41 IST

ಗುರುಪುರ, ಮೇ 2: ವಾರದ ಹಿಂದೆ ಗುರುಪುರ ಗ್ರಾಪಂ ವ್ಯಾಪ್ತಿಯ ಮಠದಗುಡ್ಡೆ ಸೈಟಿನ ಮನೆಯೊಂದರಿಂದ ಮಂಗಳೂರಿನ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಗೊಂಡು, ಕೊರೊನಾ ಸೋಂಕು ಪರೀಕ್ಷೆ ನಡೆಸಲಾದ ಬಳಿಕ ಏಕಾಏಕಿಯಾಗಿ ನಾಪತ್ತೆಯಾಗಿದ್ದ ಮೂವರು ಈಗ ಪಚ್ಚನಾಡಿ ನಿರಾಶ್ರಿತ ಟೆಂಟ್‌ನಲ್ಲಿ ಪತ್ತೆಯಾಗಿದ್ದಾರೆಂದು ಕೋವಿಡ್-19 ನೋಡೆಲ್ ಅಧಿಕಾರಿ ರಾಜಲಕ್ಷ್ಮಿ ಹಾಗೂ ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ತಿಳಿಸಿದ್ದಾರೆ.

ಪೊಳಲಿ ದ್ವಾರದ ಬಳಿ ಟೆಂಟ್‌ನಲ್ಲಿ ವಾಸಿಸುತ್ತಿದ್ದ ನಿರಾಶ್ರಿತ ಕುಟುಂಬದ ಜಾನ್ ಯಾನೆ ದಿನೇಶ್, ಆತನ ಪತ್ನಿ ಆಶಾ ಹಾಗೂ ಮಗುವಿಗೆ ವ್ಯಕ್ತಿಯೊಬ್ಬರು ಮಠದಸೈಟಿನ ಮನೆಯೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಗ್ರಾಪಂಗೆ ದೂರು ನೀಡಿದ್ದರು. ಬಳಿಕ ಗ್ರಾಪಂ ಗ್ರಾಮೀಣ ಕಾರ್ಯಪಡೆ ತೆಗೆದುಕೊಂಡ ನಿರ್ಣಯದಂತೆ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಮಿತ್‌ರಾಜ್, ನೋಡೆಲ್ ಅಧಿಕಾರಿ ರಾಜಲಕ್ಷ್ಮಿಯ ಸೂಚನೆಯಂತೆ ಮೂವರಲ್ಲಿ ತಂದೆ ಮತ್ತು ಮಗುವನ್ನು ಪುರಭವನದ ನಿರಾಶ್ರಿತರ ಕೇಂದ್ರ ಹಾಗೂ ಮಹಿಳೆಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಲಿಸಲಾಗಿತ್ತು.

ಎ.29ರಂದು ಈ ಮೂವರೂ ನಾಪತ್ತ್ತೆಯಾಗಿದ್ದರು. ಇದರ ಹಿಂದೆ ಸ್ಥಳೀಯ ವ್ಯಕ್ತಿಯೊಬ್ಬನ ಕೈವಾಡವಿರುವ ಶಂಕೆಯಿತ್ತು. ಶನಿವಾರದೊಳಗೆ ಈ ಮೂವರನ್ನೂ ಗುರುಪುರ ಗ್ರಾಪಂ ಕಚೇರಿಯಲ್ಲಿ ಹಾಜರಿ ಪಡಿಸುವಂತೆ ಅಧಿಕಾರಿಗಳ ತಂಡವು ಈ ವ್ಯಕ್ತಿಗೆ ಸೂಚನೆ ನೀಡಿದ್ದು, ಅದರಂತೆ ಮೇ 2ರಂದು ಜಾನ್ ಯಾನೆ ದಿನೇಶ್ ಗ್ರಾಪಂ ಕಚೇರಿಗೆ ಆಗಮಿಸಿ ತಮ್ಮ ಕುಟುಂಬ ಪಚ್ಚನಾಡಿಯಲ್ಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪಚ್ಚನಾಡಿಯಲ್ಲಿ ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಫ್ಲೈಯಿಂಗ್ ಸ್ಕ್ವಾಡ್ ಮೂಲಕ ದೃಢಪಡಿಸಿ ವರದಿ ಒಪ್ಪಿಸಲಾಗುವುದು ಎಂದು ರಾಜಲಕ್ಷ್ಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News