“ನನ್ನ ಮರಣದ ಸುದ್ದಿ ಘೋಷಿಸಲು ವೈದ್ಯರು ಸಿದ್ಧತೆ ನಡೆಸಿದ್ದರು”

Update: 2020-05-03 09:00 GMT

ಲಂಡನ್: “ಕೋವಿಡ್-19 ಚಿಕಿತ್ಸೆ ವೇಳೆ ನನ್ನನ್ನು ತೀವ್ರ ನಿಗಾ ಘಟಕಕ್ಕೆ ಒಯ್ಯುವ ವೇಳೆ ವೈದ್ಯರು ನನ್ನ ಮರಣದ ಸುದ್ದಿಯನ್ನು ಘೋಷಿಸಲು ಸಿದ್ಧತೆ ನಡೆಸಿದ್ದರು” ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬಹಿರಂಗಪಡಿಸಿದ್ದಾರೆ.

ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ ಅವರು ಇದೇ ಮೊದಲ ಬಾರಿಗೆ ಚಿಕಿತ್ಸೆ ವಿವರಗಳನ್ನು ನೀಡಿದ್ದಾರೆ. “ಇದು ಹಳೆಯ ಕ್ಷಣವಾದರೂ, ಅದನ್ನು ನಾನು ನಿರಾಕರಿಸಲಾರೆ” ಎಂದು ‘ದ ಸನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ಅವರು ಸ್ಟ್ಯಾಲಿನ್ ಮೃತಪಟ್ಟ ಪರಿಸ್ಥಿತಿಯ ಸಾವನ್ನು ನಿಭಾಯಿಸುವ ಕಾರ್ಯತಂತ್ರವನ್ನು ಹೊಂದಿದ್ದರು” ಎಂದು ಬಣ್ಣಿಸಿದ್ದಾರೆ.

“ಆ ಹಂತದಲ್ಲಿ ನಾನು ಪ್ರಜ್ಞೆಯ ಸ್ಥಿತಿಯಲ್ಲಿರಲಿಲ್ಲ ಹಾಗೂ ತುರ್ತು ಯೋಜನೆಗಳು ಇದ್ದವು ಎಂಬ ಅರಿವು ಅಷ್ಟೇ ಇತ್ತು. ಪರಿಸ್ಥಿತಿ ಕೈಮೀರಿದರೆ ಏನು ಮಾಡಬಹುದು ಎಂಬ ಬಗ್ಗೆ ವೈದ್ಯರು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರು” ಎಂದು ಹೇಳಿದ್ದಾರೆ.

ಮಾರ್ಚ್-27ರಂದು ಕೋವಿಡ್-19 ದೃಢಪಟ್ಟ ಬಳಿಕ ಅವರು ಕೇವಲ ಅಲ್ಪಪ್ರಮಾಣದ ಲಕ್ಷಣವನ್ನಷ್ಟೇ ಹೊಂದಿದ್ದಾರೆ ಎನ್ನಲಾಗಿತ್ತು. ಸ್ವಯಂ ಪ್ರತ್ಯೇಕತೆ ಕಾಪಾಡಿದ ಬಳಿಕವೂ ಅವರ ಅಸ್ವಸ್ಥತೆ ಮುಂದುವರಿದಿತ್ತು. ಏಪ್ರಿಲ್ 5ರಂದು ಅವರನ್ನು ಆಸ್ಪತ್ರೆಗೆ ಸೇರಿಸಿದ 24 ಗಂಟೆಗಳ ಒಳಗಾಗಿ ತೀವ್ರ ನಿಗಾ ಘಟಕಕ್ಕೆ ಸಾಗಿಸಲಾಗಿತ್ತು.

ಕನ್ಸರ್ವೇಟಿವ್ ಪಕ್ಷದ ಮುಖಂಡರಾಗಿದ್ದ ಅವರನ್ನು ಮೂರು ದಿನ ಆಕ್ಸಿಜನ್ ಸಪೋರ್ಟ್ ವ್ಯವಸ್ಥೆಯಲ್ಲಿ ಇಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News