×
Ad

ಉಡುಪಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ 1 ಲಕ್ಷ ಮಾಸ್ಕ್ ತಯಾರಿಕೆ ಗುರಿ

Update: 2020-05-03 17:56 IST

ಉಡುಪಿ, ಮೇ 3: ಪ್ರಸ್ತುತ ದೇಶ ಎದುರಿಸುತ್ತಿರುವ ಆರೋಗ್ಯ ವಿಪತ್ತು ಕೋವಿಡ್-19 ವಿರುದ್ದದ ಹೋರಾಟದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮಾಸ್ಕ್ ಬ್ಯಾಂಕ್ ಎಂಬ ಕಾರ್ಯಕ್ರಮದ ಮೂಲಕ ಪ್ರತೀ ಜಿಲ್ಲೆಯಿಂದ 1 ಲಕ್ಷ ಮಾಸ್ಕ್ ತಯಾರಿಸಿ ಹಂಚುವ ಯೋಜನೆ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಎರಡು ದಿನದಲ್ಲಿ ಈಗಾಗಲೇ 6000 ಮಾಸ್ಕ್‌ಗಳನ್ನು ತಯಾರಿಸಿದ್ದು, ಮೇ 15ರೊಳಗೆ 1 ಲಕ್ಷ ಮಾಸ್ಕ್ ತಯಾರಿಕೆಯ ಗುರಿಯನ್ನು ಹೊಂದಲಾಗಿದೆ.

ಕೇಂದ್ರ ಸರಕಾರ ಕೋವಿಡ್-19 ವಾರಿಯರ್ಸ್‌ಗಳಿಗಾಗಿ ನೀಡಿದ ಇಂಟಿ ಗ್ರೆಟೆಡ್ ಗವರ್ನಮೆಂಟ್ ಆನ್‌ಲೈನ್ ಟ್ರೈನಿಂಗ್ ಎಂಬ ವಿಶೇಷ ತರ ಬೇತಿ ಕಾರ್ಯಕ್ರಮದಲ್ಲಿ ರೋವರ್ಸ್, ರೇಂಜರ್ಸ್‌ ವಿದ್ಯಾರ್ಥಿಗಳು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್‌ನ ಶಿಕ್ಷಕರು ಭಾಗವಹಿಸಿ ವಿಶೇಷ ತರಬೇತಿ ಪಡೆದಿದ್ದಾರೆ.

ಉಡುಪಿ ಜಿಲ್ಲಾಡಳಿತ ಕಾರ್ಯಗಳಲ್ಲಿ ಸ್ವಯಂ ಸೇವೆ ಸಲ್ಲಿಸಲು ಸಿದ್ದರಿರುವ 80 ರೋವರ್ಸ್ ರೇಂಜರ್ಸ್‌ ಪಟ್ಟಿಯನ್ನು ಈಗಾಗಲೇ ಜಿಲ್ಲಾಧಿಕಾರಿ ಗಳಿಗೆ ನೀಡಿದೆ. ಜಿಲ್ಲೆಯಲ್ಲಿ ಅಗತ್ಯ ಬಿದ್ದಲ್ಲಿ ಸ್ವಯಂ ಸೇವಕರಾಗಿ ಕರೆ ನೀಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಜಿಲ್ಲಾಡಳಿತದಿಂದ ಕರೆ ಬಂದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ಸೇವೆಗೆ ಸಿದ್ದರಿದ್ದೇವೆ ಎಂದು ಜಿಲ್ಲಾ ಸಂಘಟಕ ನಿತಿನ್ ಅಮಿನ್ ತಿಳಿಸಿದ್ದಾರೆ.

ಮಕ್ಕಳಿಗೆ ವಿವಿಧ ಟಾಸ್ಕ್:  ಲಾಕ್ ಡೌನ್ ಕಾರಣದಿಂದ ಮನೆಯಲ್ಲಿಯೇ ಇರುವ ಮಕ್ಕಳು ಕ್ರೀಯಾ ಶೀಲರಾಗಲು ಮಾತ್ರವಲ್ಲದೇ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ತೊಡಗಿ ಸಿಕೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಮಕ್ಕಳಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ.

ಸ್ವಚ್ಛತೆ ಮತುತಿ ಕೈ ತೊಳೆಯುವ ವಿಧಾನಗಳ ಬಗ್ಗೆ ತಮ್ಮ ನೆರೆಹೊರೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವುದು, ಪರಿಚಿತರಿಗೆ ದೂರವಾಣಿ ಕರೆ ಮಾಡಿ ಕೋವಿಡ್-19 ಹರಡುವುದನ್ನು ತಡೆಯುವ ಬಗ್ಗೆ ತಿಳಿಸುವುದು, ಗಿಡ ನಡೆವುದು, ಮಾಸ್ಕ್ ತಯಾರಿ, ಬಟ್ಟೆ ಬ್ಯಾಗ್‌ಗಳ ತಯಾರಿ, ಕೊರೋನಾ ಜಾಗೃತಿ ಕುರಿತು ಚಿತ್ರ ರಚನೆ, ರಂಗೋಲಿ ರಚನೆ ಮಾಡಲು ತಿಳಿಸಲಾಗಿದೆ. ಮಕ್ಕಳು ಅತ್ಯಂತ ಆಸಕ್ತಿಯಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಕ್ಕಳು ತಾವು ಸಿದ್ದಪಡಿಸಿದ ಕೊರೋನಾ ಜಾಗೃತಿ ಕುರಿತ ಚಿತ್ರಗಳು ಮತ್ತು ರಂಗೋಲಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಜಿ್ಲಾ ಸಂಘಟಕ ನಿತಿನ್ ಅಮಿನ್ ತಿಳಿಸಿದ್ದಾರೆ.

ರೋವರ್ಸ್, ರೇಂಜರ್ಸ್‌ ವಿದ್ಯಾರ್ಥಿಗಳು, ರಾಜ್ಯದ ಅನೇಕ ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿ ಸುತ್ತಿದ್ದು, ಊಟ, ಉಪಹಾರ, ಕಿಟ್‌ಗಳ ವಿತರಣೆ, ಮಾಸ್ಕ್ ವಿತರಣೆ ಹಾಗೂ ಜನಸಂದಣಿ ಇರುವಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News