×
Ad

ಉಡುಪಿ ಜಿಲ್ಲೆಯಲ್ಲಿ ಮೇ 4ರಿಂದ ಮದ್ಯ ಮಾರಾಟ ಆರಂಭ

Update: 2020-05-03 21:03 IST

ಉಡುಪಿ, ಮೇ 5: ಕೋವಿಡ್ -19ಗೆ ಸಂಬಂಧಿಸಿ ಹಸಿರು ವಲಯ ಆಗಿ ರುವ ಉಡುಪಿ ಜಿಲ್ಲೆಯ ನಾಳೆಯಿಂದ ಮದ್ಯ ಮಾರಾಟ ಆರಂಭವಾಗ ಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಯಾವುದೇ ಅಕ್ರಮಗಳು ಮತ್ತು ನಿಯಮ ಉಲ್ಲಂಘನೆಯಾಗದಂತೆ ತಡೆಯಲು ಅಬಕಾರಿ ಇಲಾಖೆಯಿಂದ ಏಳು ತಂಡ ಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿರುವ ಒಟ್ಟು 399 ಮದ್ಯ ಮಾರಾಟ ಮಳಿಗೆಗಳ ಪೈಕಿ 14 ಎಂಎಸ್‌ಐಎಲ್ ಮಳಿಗೆ ಹಾಗೂ 89 ವೈನ್‌ಶಾಪ್‌ಗಳು ಸೇರಿದಂತೆ ಒಟ್ಟು 103 ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸ ಲಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಿಂಗಳುಗಳ ಕಾಲ ಮದ್ಯ ಸಿಗದ ಕಾರಣ ಒಮ್ಮೆಲೆ ನೂಕುನುಗ್ಗಲು ಉಂಟಾ ಗುವ ಸಾಧ್ಯತೆಗಳಿರುವುದರಿಂದ ಕೆಲವು ಮದ್ಯದಂಗಡಿಗಳ ಎದುರು ಬ್ಯಾರಿಕೇಡ್ ಗಳನ್ನು ಆಳವಡಿಸಲಾಗಿದೆ. ಈ ಸಂಬಂಧ ಸಾಕಷ್ಟು ಎಚ್ಚರ ವಹಿಸುವಂತೆ ಮದ್ಯ ಮಾರಾಟಗಾರರಿಗೆ ಈಗಾಗಲೇ ಸಭೆ ಕರೆದು ಸೂಚನೆ ನೀಡಲಾಗಿದೆ. ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಮೀಟರ್ ಅಂತರದಲ್ಲಿ ಗುರುತುಗಳನ್ನು ಹಾಕಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಮದ್ಯ ಖರೀದಿಸಲು ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಳಿಗೆ ತೆರೆಯುವ ಮುನ್ನ ಮತ್ತು ಬಂದ್ ಮಾಡಿದ ಬಳಿಕ ಸ್ಯಾನಿಟೈಜರ್ ಮಾಡಲು ಮಾಲಕರಿಗೆ ತಿಳಿಸಲಾಗಿದೆ. ಶಾಪ್‌ಗಳ ಸೀಲ್ ಓಪನ್ ಮಾಡುವ ಸಂದರ್ಭ ಬಹುತೇಕ ಕಡೆಗಳಲ್ಲಿ ನಮ್ಮ ಸಿಬ್ಬಂದಿಗಳು ಹಾಜರಿರುತ್ತಾರೆ. ಈ ಬಾರಿಯ ಬಜೆಟ್‌ನಲ್ಲಿ ಏರಿಕೆ ಮಾಡಲಾದ ಶೇ.6ರಷ್ಟು ಮದ್ಯದ ದರ ಏಪ್ರಿಲ್ ಒಂದರಿಂದ ಜಾರಿಗೆ ಬಂದಿದ್ದು, ಅದರಂತೆ ಮದ್ಯ ಮಾರಾಟ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ನಿಯಮ ಉಲ್ಲಂಘಿಸಿದರೆ ಕ್ರಮ

ಸದ್ಯ ಎಂಎಸ್‌ಐಎಲ್ ಮಳಿಗೆ ಹಾಗೂ ವೈನ್‌ಶಾಪ್‌ಗಳಿಗೆ ಮಾತ್ರ ತೆರೆ ಯಲು ಅವಕಾಶ ನೀಡಲಾಗಿದ್ದು, ಉಳಿದಂತೆ ಇತರ ಮದ್ಯದಂಗಡಿ ಹಾಗೂ ಬಾರ್‌ಗಳು ವ್ಯಾಪಾರ ನಡೆಸಿದರೆ ಅವುಗಳ ಪರಾವನಿಗೆಯನ್ನು ರದ್ದುಗೊಳಿಸ ಲಾಗುವುದು ಎಂದು ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಎಂಎಸ್‌ಐಎಲ್ ಮಳಿಗೆ ಹಾಗೂ ವೈನ್‌ಶಾಪ್‌ಗಳಲ್ಲಿ ಈಗಾಗಲೇ ಸೂಚಿಸಿ ರುವ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಅವುಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಏಳು ತಂಡಗಳು ಜಿಲ್ಲೆಯಾದ್ಯಂತ ಕಾರ್ಯಾಚರಿಸಲಿವೆ. ಆದೇಶದ ಪ್ರಕಾರ ಬೆಳಗ್ಗೆ 9ಗಂಟೆ ಯಿಂದ ಸಂಜೆ 7ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇದೆ. ಆದರೆ ಜಿಲ್ಲೆಯಲ್ಲಿ ಇತರ ಅಂಗಡಿಗಳು ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ತೆರೆದಿಡಲು ಅವಕಾಶ ಇರುವುದರಿಂದ ಇದಕ್ಕೂ ಅದೇ ಸಮಯವನ್ನು ನಿಗದಿ ಪಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News